ಮುಂಬೈನಲ್ಲಿರುವ ಕಿಂಗ್‌ ಫಿಷರ್ ಹೌಸ್ ರೂ.52 ಕೋಟಿಗೆ ಮಾರಾಟ..!

ಮುಂಬೈ, ಆಗಸ್ಟ್ 17, 2021(www.justkannada.in): ಕಿಂಗ್‌ಫಿಷರ್ ಸ್ಥಾಪಕ, ಪ್ರಸ್ತುತ ದಿವಾಳಿಯಾಗಿರುವಂತಹ ಉದ್ಯಮಿ ವಿಜಯ್ ಮಲ್ಯಾ ಅವರ ಒಡೆತನದ, ಈ ಹಿಂದೆ ಹೆಡ್‌ ಕ್ವಾಟರ್ಸ್ ಆಗಿದ್ದಂತಹ ಮುಂಬೈನಲ್ಲಿರುವ ಕಿಂಗ್‌ ಫಿಷರ್ ಹೌಸ್ ಅನ್ನು ಸ್ಯಾಟರ್ನ್ ರಿಯಾಲ್ಟರ್ಸ್ ಎಂಬ ಖಾಸಗಿ ಸಂಸ್ಥೆಗೆ ರೂ.52 ಕೋಟಿಗೆ ಮಾರಾಟ ಮಾಡಲಾಗಿದೆ.

ಹಲವು ವರ್ಷಗಳವರೆಗೆ ಹಲವಾರು ಬಾರಿ ಹರಾಜು ನಡೆಸಲಾಯಿತಾದರೂ ಮಾರಾಟ ಮಾಡುವವರಿಗೆ ಸೂಕ್ತ ಖರೀದಿದಾರರು ಲಭಿಸಲಿಲ್ಲ. ಹಾಗಾಗಿ, ಮೂಲ ಬೆಲೆಯ ಕಾಲು ಭಾಗದ ಮೊತ್ತಕ್ಕೆ ಈ ಸ್ಥಳವನ್ನು ಮಾರಾಟ ಮಾಡಲಾಗಿದೆಯಂತೆ.

ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ತಜ್ಞರ ಪ್ರಕಾರ ಬ್ಯಾಂಕುಗಳು ಈ ಸ್ಥಳಕ್ಕೆ ಬಹಳ ಹೆಚ್ಚಿನ ಮೊತ್ತ ನಿಗಧಿಪಡಿಸಿದ್ದವಂತೆ. ಆದರೆ ಈ ಸ್ಥಳಕ್ಕೆ ಹಲವು ಮಿತಿಗಳಿವೆಯಂತೆ.

ಈ ಸ್ಥಳ ಮುಂಬೈ ವಿಮಾನನಿಲ್ದಾಣದ ಹೊರಭಾಗದಲ್ಲಿದ್ದು, ಇಲ್ಲಿ ಸ್ಥಳ ಅಭಿವೃದ್ಧಿಪಡಿಸುವ ಸಾಧ್ಯತೆಗಳು ಕಡಿಮೆ ಇದೆಯಂತೆ. ಈ ಕಟ್ಟಡ ಒಟ್ಟು ೨,೪೦೨ ಚದರಮೀಟರ್ ನಿವೇಶನದಲ್ಲಿದ್ದು, ನೆಲಮಹಡಿ ಜೊತೆಗೆ ಒಂದು ಅಪ್ಪರ್ ಗ್ರೌಂಡ್ ಫ್ಲೋರ್ ಹಾಗೂ ಮೇಲ್ಮಹಡಿ ಇದೆ. ಈ ಕಟ್ಟಡದ ಪ್ರದೇಶ ಅಳತೆ ೧,೫೮೬ ಚದರ ಮೀಟರ್‌ಗಳು.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Kingfisher- House – Mumbai -sold -Rs 52 crore.