ಮೈಸೂರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆಸ್ತಿಗಳ ಪರಭಾರೆ ಮಾಡುತ್ತಿದ್ದ ಕಿಂಗ್ ಪಿನ್ ಅರೆಸ್ಟ್

ಮೈಸೂರು, ಸೆಪ್ಟೆಂಬರ್ 11, 2022 (www.justkannada.in): ನಕಲಿ ದಾಖಲೆ ಸೃಷ್ಟಿಸಿ ಆಸ್ತಿಗಳ ಪರಭಾರೆ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.

ಅಧಿಕಾರಿಗಳ ನಕಲಿ ಸೀಲ್, ಸಿಗ್ನೇಚರ್ ಪತ್ತೆಯಾಗಿದೆ. ಅಪಾರ ಪ್ರಮಾಣದ ನಕಲಿ ದಾಖಲಾತಿ ಪತ್ತೆ ಸಿಕ್ಕಿದೆ. ಮುಡಾ,ಪಾಲಿಕೆ ಸೇರಿ‌ ಸರ್ಕಾರಿ ಅಧಿಕಾರಿಗಳ ದಾಖಲಾತಿಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ಭಾರೀ ವಂಚಕರ ಜಾಲ ಬಯಲಾಗಿದೆ. ಯಾರದೋ ಆಸ್ತಿಯನ್ನು ಮತ್ಯಾರಿಗೋ ಮಾರಾಟ ಮಾಡುತ್ತಿದ್ದ ಜಾಲ ನಗರದಲ್ಲಿ ಸಿಕ್ಕಿ ಬಿದ್ದಿದೆ.

ಸರ್ಕಾರಿ ಹಾಗೂ ಖಾಸಗಿ ಆಸ್ತಿಗಳಿಗೆ ನಕಲಿ ಮಾಲೀಕರನ್ನು ಸೃಷ್ಟಿಸಿ ಬ್ಯಾಂಕ್‍ನಲ್ಲಿ ಸಾಲ ಪಡೆಯುತ್ತಿದ್ದ ಈ ಜಾಲದ ಸದಸ್ಯರ ಬಳಿ ವಿವಿಧ ಇಲಾಖೆಗಳು ಹಾಗೂ ಅಧಿಕಾರಿಗಳ ಸೀಲ್‍ಗಳು ಪತ್ತೆಯಾಗಿವೆ.

ನಕಲಿ ಇ-ಸ್ಟ್ಯಾಂಪ್ ಪೇಪರ್‍ಗಳು, ಲ್ಯಾಪ್‍ಟಾಪ್, ಪ್ರಿಂಟರ್ ಹಾಗೂ ಮೊಬೈಲ್‍ಗಳ ವಶಕ್ಕೆ ಪಡೆಯಲಾಗಿದೆ.  ಈ ವಂಚಕರು ಶಾಸಕರೊಬ್ಬರ ತಂದೆಯ ಆಸ್ತಿಗೇ ನಕಲಿ ಮಾಲೀಕನನ್ನು ಸೃಷ್ಟಿಸಿ ಮಾರಾಟ ಮಾಡಿದ್ದರು.  ಈ ಸಂಬಂಧ ಮೇಟಗಳ್ಳಿ ಠಾಣೆಯಲ್ಲಿ ಕಳೆದ ಜನವರಿಯಲ್ಲಿ ಪ್ರಕರಣ ದಾಖಲಾಗಿದೆ

ಮೈಸೂರಿನ ಯಾದವಗಿರಿ ಯಲ್ಲಿರುವ 80×100 ಅಳತೆಯ ಮುಡಾಗೆ ಸೇರಿದ ನಿವೇಶನದ ಮೇಲೆ ಬ್ಯಾಂಕ್‍ನಲ್ಲಿ ಸಾಲ ಪಡೆಯಲು ಪ್ರಯತ್ನಿಸಿದ್ದರು. ಎರಡು ವರ್ಷಗಳ ಹಿಂದೆ ಈ ಕುರಿತು ಮುಡಾ ಆಯುಕ್ತರು ಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಬೆಂಗಳೂರು ಶಿವಾಜಿನಗರ ಶಾಸಕ ಅರ್ಷದ್ ಅವರ ತಂದೆಯ ಆಸ್ತಿಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕು ಕಚೇರಿಯಲ್ಲಿ ಆರ್‍ಟಿಸಿ ಬದಲಾವಣೆ ಮಾಡಲು ಅರ್ಜಿ ಸಲ್ಲಿಸಿದಾಗ ಬೆಳಕಿಗೆ ಪ್ರಕರಣ ಬೆಳಕಿದೆ ಬಂದಿದೆ.

ಯಾದವ ಗಿರಿಯ ಮುಡಾ ನಿವೇಶನದ ಪ್ರಕರಣವು ಬ್ಯಾಂಕ್‍ನ ಕಾನೂನು ಸಲಹೆಗಾರರು ದಾಖಲೆ ಪತ್ರಗಳನ್ನು ಪರಿಶೀಲಿಸಿದ ವೇಳೆ ಬೆಳಕಿಗೆ ಬಂದಿದೆ.  ಈ ವಂಚಕರಿಂದ ಯಾರದೋ ಆಸ್ತಿಯನ್ನು ಖರೀದಿ ಮಾಡಿರುವ ಅಮಾಯಕರು ಇನ್ನಷ್ಟು ಮಂದಿ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅವರು ದಾಖಲೆಗಳನ್ನು ಪರಿಶೀಲಿಸದೆ ಇರುವುದರಿಂದ ಆ ಪ್ರಕರಣಗಳು ಬೆಳಕಿಗೆ ಬಂದಿಲ್ಲ ಎಂದು ಹೇಳಲಾಗುತ್ತಿದೆ.

ಲಕ್ಷ್ಮೀಪುರಂ ಮತ್ತು ಮೇಟಗಳ್ಳಿ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ಒಬ್ಬನೇ ಕಿಂಗ್‍ಪಿನ್  ಬಂಧನಕ್ಕಾಗಿ ಮೈಸೂರು ನಗರ ಪೊಲೀಸರು ಬಲೆ ಬೀಸಿದ್ದರು. ಈ ವ್ಯಕ್ತಿ ಪದೇ ಪದೆ ಮೊಬೈಲ್‍ಗಳನ್ನು ಬದಲಾವಣೆ ಮಾಡುತ್ತಿದ್ದರಿಂದ ಆತನ ಸುಳಿವೇ ಸಿಗುತ್ತಿರಲಿಲ್ಲ

ಮೈಸೂರಿನ ರಾಮಕೃಷ್ಣನಗರ ವಿಶ್ವಮಾನವ ಜೋಡಿರಸ್ತೆಗೋಲ್ಡನ್ ಬೆಲ್ಸ್ ಸರ್ವೀಸ್ ಅಪಾರ್ಟ್‍ಮೆಂಟ್‍ನ ಕೊಠಡಿ ಸಂಖ್ಯೆ 301ರಲ್ಲಿ ಪ್ರಕರಣದ ಕಿಂಗ್‍ಪಿನ್ ಬಂಧಿಸಲಾಗಿದೆ. ಡಿಸಿಪಿ ಪ್ರದೀಪ್‍ಗುಂಟಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.