ಖರ್ಗೆಯವರ ಕಲ್ಬುರ್ಗಿ ಭಾಗವನ್ನ ಅಭಿವೃದ್ದಿ ಮಾಡಿದ್ದು ಬಿಜೆಪಿ-ಎಐಸಿಸಿ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಟಾಂಗ್.

ನವದೆಹಲಿ,ಫೆಬ್ರವರಿ,9,2023(www.justkannada.in): ಮಲ್ಲಿಕಾರ್ಜುನ ಖರ್ಗೆ ಕ್ಷೇತ್ರದಲ್ಲಿ ಬಿಜೆಪಿ ಅಭಿವೃದ್ದಿ ಕೆಲಸಗಳನ್ನ ಮಾಡುತ್ತಿದೆ. ಖರ್ಗೆಯವರ ಕಲ್ಬುರ್ಗಿ ಭಾಗವನ್ನ ಅಭಿವೃದ್ದಿ ಮಾಡಿದ್ದು ಬಿಜೆಪಿ ಎಂದು ಎಐಸಿಸಿ ಅಧ್ಯಕ್ಷರಿಗೆ ಪ್ರಧಾನಿ ನರೇಂದ್ರ ಮೋದಿ ಟಾಂಗ್ ನೀಡಿದರು.

ರಾಜ್ಯಸಭೆಯಲ್ಲಿ ಇಂದು ಮಾತನಾಡಿದ ಪ್ರಧಾನಿ ಮೋದಿ, ದೇಶದ ಜನತೆ ಕಾಂಗ್ರೆಸ್ ತಿರಸ್ಕರಿಸಿದ್ದಾರೆ. ಕರ್ನಾಟಕದಲ್ಲಿ 1.7 ಜನ್ ಧನ್ ಖಾತೆ ತೆರೆಯಲಾಗಿದೆ. ಕಲ್ಬುರ್ಗಿ ಜಿಲ್ಲೆಯಲ್ಲಿ 8 ಲಕ್ಷ ಜನ್ ಧನ್ ಖಾತೆ ತೆರೆಯಲಾಗಿದೆ ಎಂದರು.

ವಿಪಕ್ಷಗಳ ವಿರುದ್ಧ ಗುಡುಗಿದ ಪ್ರಧಾನಿ ಮೋದಿ, ನೀವು ಎಷ್ಟೇ ಕೆಸರು ಎರಚಲು ಪ್ರಯತ್ನಿಸಿದರೂ ಎಷ್ಟೇ ತೆಗಳಿದರೂ ಕಮಲ ಅರಳುತ್ತಲೇ ಇರುತ್ತದೆ  ಕಮಲ ಕೆಸರಿನಿಂದಲೇ ಅರಳುತ್ತದೆ. ವಿಪಕ್ಷಗಳ ನಡವಳಿಕೆ ದೇಶದ ಹಿತಕ್ಕೆ ವಿರುದ್ಧವಾಗಿದೆ. ಹಿಂದೆ ಗರೀಬಿ ಹಠಾವೋ ಎಂದು ಹೇಳುತ್ತಿದ್ದರು ಆದರೆ 4 ದಶಕಗಳಿಂದ ಕಾಂಗ್ರೆಸ್ ಏನನ್ನೂ ಮಾಡಲಿಲ್ಲ. ಬಡತನ ನಿರ್ಮೂಲನೆಗೆ ನಾವು ಅಗತ್ಯ ಕ್ರಮ ಕೈಗೊಂಡಿದ್ದೇವೆ. ದೇಶದ ಜನರ ನಿರೀಕ್ಷೆ ಆಕಾಂಕ್ಷೆಈಡೇರಿಸಲು ಶ್ರಮಿಸುತ್ತಿದ್ದೇವೆ.  ಕಾಂಗ್ರೆಸ್ ನಾಯಕರ ಕಣ್ಣೀರಿಗೆ ದೇಶದ ಜನರು ಬೆಲೆ ಕೊಡಲ್ಲ ಎಂದು ಲೇವಡಿ ಮಾಡಿದರು.

ಸಿರಿಧಾನ್ಯ ಸೂಪರ್ ಫುಡ್,  ಮಕ್ಕಳ ಪೋಷಣೆಗಾಗಿ ಸಿರಿಧಾನ್ಯ ಬಹಳ ಮುಖ್ಯ.  ರಸಗೊಬ್ಬರ ವಿಚಾರದಲ್ಲೂ ಸಾಕಷ್ಟು ಸುಧಾರಣೆ ತಂದಿದ್ದೇವೆ. ಅದರ ಪ್ರಯೋಜನ ರೈತರಿಗಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

Key words: Kharge’s- Kalburgi developed -Prime Minister -Modi