ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಕೆಜಿಎಫ್-2 ಚಿತ್ರೀಕರಣ

Promotion

ಬಳ್ಳಾರಿ, ಡಿಸೆಂಬರ್ 26, 2019 (www.justkannada.in): ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಜಿಂದಾಲ್ ಉಕ್ಕಿನ ಕಾರ್ಖಾನೆಯಲ್ಲಿ ‘ಕೆಜಿಎಫ್ ಭಾಗ-2’ ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ.

ಕಳೆದ 2 ದಿನಗಳಿಂದ ತುಂಗಾ ಮೈನ್ಸ್ ವ್ಯಾಪ್ತಿಯಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ. ಚಿತ್ರತಂಡದ ನೂರಾರು ಕಲಾವಿದರು ಈಗಾಗಲೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಶೂಟಿಂಗ್ ಗಾಗಿ ಅದ್ಧೂರಿ ಸೆಟ್ ಹಾಕಲಾಗಿದೆ. ಶೂಟಿಂಗ್‍ನ ವಿಡಿಯೋ ತುಣುಕೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಅನೇಕ ವಾಹನಗಳು ಸಾಲಾಗಿ ಬರುತ್ತಿದ್ದು, ನೂರಾರು ಮಂದಿ ಚಿತ್ರೀಕರಣದಲ್ಲಿ ಇರುವುದನ್ನು ಕಾಣಬಹುದು. ನಟ ಯಶ್ ಡಿಸೆಂಬರ್ 26 ರಂದು ಶೂಟಿಂಗ್‍ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಅಭಿಮಾನಿಗಳು ಯಶ್ ಅವರನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.