ಕುವೈತ್ ನಲ್ಲಿ ಕೊರೋನಾಗೆ ಕಾರವಾರ ಮೂಲದ ವ್ಯಕ್ತಿ ಬಲಿ…

ಕಾರವಾರ,ಜೂ,3,2020(www.justkannada.in):  ಕುವೈತ್ ನಲ್ಲಿ ರಾಜ್ಯದ ಕಾರವಾರ ಮೂಲದ ವ್ಯಕ್ತಿಯೊಬ್ಬರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಕಳೆದ 9 ತಿಂಗಳ ಹಿಂದೆ ಕುವೈತ್ ಗೆ ಹೋಗಿದ್ದ 40 ವರ್ಷದ ವ್ಯಕ್ತಿ ಕೊರೋನಾಗೆ ಬಲಿಯಾದವರು. ವ್ಯಕ್ತಿಗೆ ಮೇ 24ರಂದು ಜ್ವರ ಕಾಣಿಸಿಕೊಂಡಿತ್ತು. ಬಳಿಕ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರಿಗೆ ಕೊರೋನಾ ಸೋಂಕಿರುವುದು ದೃಢವಾಗಿತ್ತು.

ಈಗ ವ್ಯಕ್ತಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಇನ್ನು ಶವವನ್ನ ಕಾರವಾರಕ್ಕೆ ತರಲು ಕಷ್ಟ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಹರೀಶ್ ಕುಮಾರ್ ತಿಳಿಸಿದ್ದಾರೆ.

Key words: Karwana- Kuwait- man dead- corona virus