ವಿಜಯಪುರದಲ್ಲಿ ಎರಡು ದಿನಗಳ ಕಾಲ ರಾಜ್ಯಮಟ್ಟದ ಬುಡಕಟ್ಟು ಉತ್ಸವ…

ಮೈಸೂರು,ಆ,5,2019(www.justkannada.in):  ವಿಜಯಪುರದಲ್ಲಿ ಆಗಸ್ಟ್ 9ರಿಂದ ಎರಡು ದಿನಗಳ ಕಾಲ ರಾಜ್ಯಮಟ್ಟದ ಬುಡಕಟ್ಟು ಉತ್ಸವವನ್ನ ಆಯೋಜಿಸಲಾಗಿದೆ.

ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಭಾರತ ಸರ್ಕಾರದ ಪ್ರಾಯೋಜಕತ್ವದಲ್ಲಿ, ಬೆಂಗಳೂರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ವತಿಯಿಂದ ವಿಜಯಪುರ ಜಿಲ್ಲಾಡಳಿತದ ಸಹಯೋಗದೊಂದಿಗೆ ರಾಜ್ಯಮಟ್ಟದ ಬುಡಕಟ್ಟು ಉತ್ಸವವನ್ನ ಆಯೋಜಿಸಲಾಗಿದೆ. ಆಗಸ್ಟ್ 9 ರಿಂದ ಎರಡು ದಿನಗಳ ಕಾಲ ನಗರದ  ಕಂದಗಲ್  ಶ್ರೀ ಹನುಮಂತರಾಯರ  ರಂಗಮಂದಿರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಮೈಸೂರಿನ ಕರ್ನಾಟಕ ರಾಜ್ಯಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಟಿ.ಟಿ ಬಸವನಗೌಡ ತಿಳಿಸಿದ್ದಾರೆ.

ಹಾಗೆಯೇ ಕಾರ್ಯಕ್ರಮವನ್ನ ವಿಜಯಪುರ ಲೋಕಸಭಾ ಸಂಸದರಾದ ರಮೇಶ್ ಜಿಗಜಿಣಗಿ ಅವರು ಉದ್ಘಾಟಿಸಲಿದ್ದು, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.  ವಿಜಯಪುರ ಜಿಲ್ಲಾಪಂಚಾಯತ್ ಅಧ್ಯಕ್ಷರಾದ  ಶಿವಯೋಗಪ್ಪ ನೇದಲಗಿ, ಶಾಸಕರುಗಳಾದ ಎಂ.ಬಿ ಪಾಟೀಲ್, ಶಿವಾನಂದ್ ಎಸ್ ಪಾಟೀಲ್, ಎ.ಎಸ್ ಪಾಟೀಲ್,  ಎಂಸಿ ಮನಗೋಳಿ ಹಾಗೂ  ಪರಿಷತ್ ಸದಸ್ಯರಾದ ಎಸ್.ಆರ್ ಪಾಟೀಲ್, ಅರುಣ್ ಶಹಪೂರ, ಪ್ರಕಾಶ್ ರಾಠೋಡ, ಹಣಮಂತ ನಿರಾಣಿ ಮುಂತಾದ  ಗಣ್ಯರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ  ಆಗಮಿಸಲಿದ್ದಾರೆ ಎಂದು ಟಿ.ಟಿ ಬಸವನಗೌಡ ಅವರು ತಿಳಿಸಿದ್ದಾರೆ.

Key words:  state-level- tribal festival – two days- Vijayapura.