ರಾಜ್ಯದ 14 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಮತ ಎಣಿಕೆ ಪ್ರಾರಂಭ

ಬೆಂಗಳೂರು, ನವೆಂಬರ್ 14, 2019 (www.justkannada.in): ಕರ್ನಾಟಕದ 14 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದೆ.

ಒಟ್ಟು 418 ವಾರ್ಡ್‌ಗಳಿಗೆ ನವೆಂಬರ್ 12ರಂದು ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.ಗುರುವಾರ ಬೆಳಗ್ಗೆ 8 ಗಂಟೆಗೆ ಆಯಾ ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ಆರಂಭವಾಗಿದೆ.

ಎರಡು ಮಹಾನಗರ ಪಾಲಿಕೆ, 6 ನಗರ ಸಭೆ, 3 ಪಟ್ಟಣ ಪಂಚಾಯಿತಿ, 3 ಪುರಸಭೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ.