#ಹಿಂದಿಗುಲಾಮಗಿರಿಬೇಡ ಟ್ರೆಂಡಿಂಗ್ ಬೆನ್ನಲ್ಲೇ ಮತ್ತೊಂದು ಅಂಥದ್ದೆ ಸಂಘರ್ಷದ ‘ ಮುಲಾಕಾತ್ ‘ ಗೆ ಕನ್ನಡಿಗರು ಮುಂದಾಗಬೇಕಿದೆ.

kannada t-shirts

 

ಬೆಂಗಳೂರು, ಜ.18, 2021 : (www.justkannada.in news ) ಕೋವಿಡ್ ಹಿನ್ನೆಲೆಯಲ್ಲಿ ಕಾರಾಗೃಹದ ಕೈದಿಗಳ ಸಂದರ್ಶನಕ್ಕೆಂದು ಜಾರಿಗೊಳಿಸಿರುವ ‘ಇ–ಮುಲಾಕಾತ್’ ಒಂದು ಅತ್ಯುತ್ತಮ ವ್ಯವಸ್ಥೆ. ಆದರೆ ವಿಪರ್ಯಾಸವೆಂದರೆ ಇಲ್ಲಿ ಕನ್ನಡ ಭಾಷೆ ಕಡೆಗಣಿಸಿ ಇಂಗ್ಲಿಷ್ ಮತ್ತು ಹಿಂದಿಗೆ ಮಾನ್ಯತೆ ನೀಡಲಾಗಿದೆ.

ಕೋವಿಡ್‌ ಕಾರಣದಿಂದ ಕೈದಿಗಳನ್ನು ಅವರ ಸಂಬಂಧಿಕರು ಭೇಟಿ ಮಾಡಲು ಅವಕಾಶವಿರಲಿಲ್ಲ. ಇದರಿಂದ ಕೈದಿಗಳು ಹೊರ ಪ್ರಪಂಚದ ಸಂಪರ್ಕ ಕಳೆದುಕೊಂಡು ಅತಂತ್ರರಾಗಿದ್ದರು. ಇದನ್ನು ಮನಗಂಡ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ, ಸಂಬಂಧಿಕರನ್ನು ಭೇಟಿ ಮಾಡಲು ಪರಿತಪಿಸುತ್ತಿದ್ದ ಕೈದಿಗಳ ಅನುಕೂಲಕ್ಕಾಗಿ ಡಿ. 2ರಂದು ಏಕಕಾಲಕ್ಕೆ ಎಲ್ಲ ಕಾರಾಗೃಹಗಳಲ್ಲೂ ‘ಇ– ಮುಲಾಕಾತ್’ ಸೌಲಭ್ಯ ಜಾರಿಗೊಳಿಸಿತು.

jk

ಇದರಿಂದ ಸಂಬಂಧಿಕರು ಮನೆಯಲ್ಲೇ ಕುಳಿತು ವಿಡಿಯೊ ಕಾಲ್ ಮೂಲಕ ಕೈದಿಗಳ ಜತೆ ಮಾತನಾಡಬಹುದು. ಇದೊಂದು ಉತ್ತಮ ವ್ಯವಸ್ಥೆ ಎಂಬ ಮೆಚ್ಚುಗೆಗೂ ಪಾತ್ರವಾಗಿದೆ.

‘ಇ–ಮುಲಾಕಾತ್’ ಸೌಲಭ್ಯ ಬಳಕೆಗೆ ಮೊದಲು ಕೈದಿಗಳ ಕುಟುಂಬದವರು ಸ್ಮಾರ್ಟ್‌ಫೋನ್‌ ಅಥವಾ ಕಂಪ್ಯೂಟರ್‌ ಮೂಲಕ ಎನ್‌ಪಿಐಪಿ (New visit registration prison portal ) ವೆಬ್‌ಸೈಟ್‌ನಲ್ಲಿ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ನಮೂದಿಸಿ ನೋಂದಣಿ ಮಾಡಿ ಆನ್‌ಲೈನ್‌ನಲ್ಲಿಯೇ ಅರ್ಜಿ ಭರ್ತಿ ಮಾಡಬೇಕು.

Karnataka-prison-e-mulakatha-kannada-neglected-jail-mates-meet

ಆದರೆ, ಈ ಅರ್ಜಿ ನಮೂನೆ ಇಂ‌ಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರವೇ ಇದ್ದು, ಕನ್ನಡ ಭಾಷೆಗೆ ಒತ್ತು ನೀಡಿಲ್ಲ. ಪರಿಣಾಮ ರಾಜ್ಯದ ವಿವಿಧ ಕಾರಾಗೃಹಗಳಲ್ಲಿನ ಖೈದಿಗಳ ಬಹುತೇಕ ಸಂಬಂಧಿಕರು ಇದನ್ನು ಸದುಪಯೋಗ ಪಡೆದುಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಆದ್ದರಿಂದ ಈ ಕೂಡಲೇ ಸಂಬಂಧಿಸಿದ ಇಲಾಖೆ, ಈ ನಿಟ್ಟಿನಲ್ಲಿ ಗಮನ ಹರಿಸಿ ಕನ್ನಡ ಭಾಷೆಗೆ ಒತ್ತು ನೀಡಬೇಕಾಗಿದೆ.

 

key words : Karnataka-prison-e-mulakatha-kannada-neglected-jail-mates-meet

website developers in mysore