ಕೆಎಂಎಫ್ ಮಾದರಿ ಈ ಕೂಡಲೇ ತಾಲೂಕಿಗೊಂದು ‘ ಕೋಲ್ಡ್ ಸ್ಟೋರೇಜ್ ‘ ಘಟಕ ಪ್ರಾರಂಬಿಸಲು ಆಗ್ರಹ.

kannada t-shirts

 

ಮೈಸೂರು, ಏ.30, 2020 : ( www.justkannada.in news ) : ಕೊರೋನ ಕೋವಿಡ್೧೯ ಕಾಲಿಟ್ಟ ದಿನದಿಂದ ರಾಜ್ಯದಾದ್ಯಂತ ರೈತರ ಸ್ಥತಿ ಚಿಂತಾಜನಕವಾಗಿದೆ. ಕಳೆದ ೪೦ ದಿನಗಳ ಲಾಕ್ ಡೌನ್ ಅವಧಿ ಯಲ್ಲಿ ಅತ್ಯಂತ ಶೋಚನೀಯ ಸ್ಥತಿ ರೈತ ಸಮುದಾಯದ್ದು.ರೈತ ತಾನು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗದೆ ಕಂಗಾಲಾಗಿದ್ದಾನೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ ಎಂದು ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಕಮಿಟಿ ವಕ್ತಾರ ಹೆಚ್.ಎ.ವೆಂಕಟೇಶ್ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಕಮಿಟಿ ವಕ್ತಾರ ಹೆಚ್.ಎ.ವೆಂಕಟೇಶ್…

 karnataka-kmf-cold-storage-congress-venkatesh

ರೈತ ಬೆಳೆದ ತೋಟಗಾರಿಕೆ ಬೆಳೆಗಳನ್ನು ಕೇಳುವವರೆ ಇಲ್ಲಂದಂತಾಗಿದೆ.ಬೆಳೆ ಮಾರಲಾಗದೆ ರೈತ ಕಂಗಾಲಾಗಿದ್ದಾನೆ.ದಲ್ಲಾಳಿಗಳ ಹಾವಳಿ ಇಂದ ಅಸಲು ಸಿಗದೆ ರೈತ ನಾಡಿನಾದ್ಯಂತ ಕಣ್ಣೀರುಡುತ್ತಿದ್ದಾನೆ. ಈ ಕೂಡಲೇ ತಾಲೂಕಿಗೊಂದು ಕೋಲ್ಡ್ ಸ್ಟೋರೇಜ್ ಘಟಕ ಪ್ರಾರಂಬಿಸಿ ರೈತರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ರೂಪಿಸಲು ಒತ್ತಾಯಿಸಿದ್ದಾರೆ.

ಈಗಾಗಲೇ KMF ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂಬುದು ಸರ್ಕಾರಕ್ಕೆ ಗೊತ್ತಿದೆ. ಅದೇ ರೀತಿ ತೋಟಗಾರಿಕೆ ಬೆಳೆಯನ್ನು ಕನಿಷ್ಟ ವಾರಕ್ಕೆ ಎರಡು ಬಾರಿ ಹಳ್ಳಿ ಹಳ್ಳಿ ಗೆ ತೆರಳಿ ವಾಹನ ಗಳಲ್ಲಿ ರೈತರ ಬೆಳೆ ಸಂಗ್ರಹಿಸುವ ಕೆಲಸವನ್ನು ತತ್ ಕ್ಷಣದಿಂದ ಸರ್ಕಾರ ಆರಂಬಿಸಲು ಒತ್ತಾಯಿಸುತ್ತೇನೆ.ಈ ಸರ್ಕಾರಕ್ಕೆ ರೈತ ಪರ ಕಾಳಜಿ ಇದ್ದರೆ ಕೂಡಲೆ ಇದಕ್ಕೆ ಚಾಲನೆ ನೀಡಲಿ.ಈ ಕುರಿತಂತೆ ತತ್ ಕ್ಷಣ ಕೃಷಿ ,ತೋಟಗಾರಿಕೆ ಹಾಗು ಸಹಕಾರ ಸಚಿವ ರ ಸಭೆ ಕರೆದು ಮುಖ್ಯಮಂತ್ರಿ ಗಳು ಚರ್ಚಿಸಿ ಕ್ರಮ ಕೈಗೊಳ್ಳಬೇಕು.

ಕನಿಷ್ಟ ಹೋಬಳಿ ಮಟ್ಟದಲ್ಲಿ ರೈತರ ಬೆಳೆ ಖರೀದಿಸ ಬೇಕು.ಇಲ್ಲದಿದ್ದಲ್ಲಿ ರೈತ ರ ಅನಾಹುತದ ಎಲ್ಲಾ ಜವಾಬ್ದಾರಿ ಗಳಿಗೆ ಸರ್ಕಾರವೇ ಹೊಣೆ ಹೊರ ಬೇಕು. ಆದ್ದರಿಂದ ಮುಖ್ಯಮಂತ್ರಿಗಳು ಸಚಿವ ಸಂಪುಟದಲ್ಲೇ ಈ ವಿಷಯ ಚರ್ಚಿಸಿ ಕೂಡಲೇ ರಾಜ್ಯದ ಎಲ್ಲಾ ೨೪೦ ತಾಲೂಕು ಗಳಲ್ಲಿ ಶಿಥಿಲೀಕರಣ ಘಟಕ ಸ್ಥಾಪನೆೆಗೆ ನಿರ್ಧಾರ ಕೈಗೊಳ್ಳಬೇಕು . ಇದರಿಂದ ಕೂಲಿಕಾರ್ಮಿಕರ ವಲಸೆ ಕೂಡ ತಡೆಯಬಹುದು. ಆದ್ದರಿಂದ ಸರ್ಕಾರ ಕೋಲ್ಡ ಸ್ಟೋರೇಜ್ ಘಟಕ ಸ್ಥಾಪನೆ ಯನ್ನು ತುರ್ತಾಗಿ ಕೈಗೊಳ್ಳ ಬೇಕೆಂದು ಒತ್ತಾಯಿಸಿದ್ದಾರೆ.

 

key words : karnataka-kmf-cold-storage-congress-venkatesh

website developers in mysore