ಕರ್ನಾಟಕ: 221 ವಿಧಾನಸಭಾ ಕ್ಷೇತ್ರಗಳಲ್ಲಿ 12 ಲಕ್ಷ ಹೊಸ ಮತದಾರರ ಸೇರ್ಪಡೆ.

ಬೆಂಗಳೂರು, ಜನವರಿ,6, 2023(www.justkannada.in): ರಾಜ್ಯ ಮುಖ್ಯ ಚುನಾವನಾ ಅಧಿಕಾರಿ ಮನೋಜ್ ಕುಮಾರ್ ಮೀನಾ ಅವರು ರಾಜ್ಯದ ಒಟ್ಟು 221 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಗೆ 12 ಲಕ್ಷ ಮತದಾರರ ಹೆಸರುಗಳನ್ನು ಸೇರ್ಪಡೆಗೊಳಿಸಲಾಗಿದ್ದು, 6 ಲಕ್ಷ ಹೆಸರುಗಳನ್ನು ಅಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿನ ಶಿವಾಜಿನಗರ, ಮಹದೇವಪುರ ಹಾಗೂ ಚಿಕ್ಕಪೇಟೆ, ವೋಟ್‌ ಗೇಟ್ ಹಗರಣ ಎದುರಿಸುತ್ತಿರುವ ಈ ಮೂರು ವಿಧಾನಸಭಾ ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿಯನ್ನು ಪ್ರಾದೇಶಿಕ ಆಯುಕ್ತರು ತನಿಖೆಯನ್ನು ಪೂರ್ಣಗೊಳಿಸಿದ ನಂತರ ಅಂತಿಮಗೊಳಿಸಲಾಗುವುದು ಎಂದರು.

“ಈ ಬಾರಿ ನಾವು ಸಮಾಜದ ಅಂಚಿನಲ್ಲಿರುವವರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಹೆಚ್ಚು ಗಮನ ನೀಡಿದ್ದು, ೬.೮೧ ಲಕ್ಷ ಮತದಾರರು ಸ್ವಯಂಪ್ರೇರಿತವಾಗಿ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ. ಹೊಸದಾಗಿ ಸೇರ್ಪಡೆಯಾಗಿರುವ ಮತದಾರರ ಪೈಕಿ ೬.೫ ಲಕ್ಷ ಮಹಿಳೆಯರು ಹಾಗೂ ೫.೮೦ ಲಕ್ಷ ಪುರುಷರಿದ್ದಾರೆ,” ಎಂದು ವಿವರಿಸಿದರು.

೧೭ ವರ್ಷ ವಯಸ್ಸನ್ನು ಪೂರ್ಣಗೊಳಿಸಿರುವಂತಹ ಯುವಜನರಿಗೆ ಈಗಲೂ ಸಹ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಸೇರಿಸುವ ಅವಕಾಶವಿದೆ. “ಈವರೆಗೆ ೧೭+ ವಯಸ್ಸಿನವರ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸಲು ೨೫,೨೯೯ ಅರ್ಜಿಗಳು ಬಂದಿರುವುದಾಗಿ ತಿಳಿಸಿದರು.

ರಾಜ್ಯದ ಒಟ್ಟು ೨೨೧ ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣ ಕ್ಷೇತ್ರ ೬.೫೦ ಲಕ್ಷದೊಂದಿಗೆ ಅತೀ ಹೆಚ್ಚಿನ ಮತದಾರರನ್ನು ಹೊಂದಿದ್ದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ೧.೬೬ ಲಕ್ಷ ಮತದಾರರೊಂದಿಗೆ ಅತೀ ಕಡಿಮೆ ಮತದಾರಿರುವ ಕ್ಷೇತ್ರವಾಗಿದೆ. ಚಿಕ್ಕಪೇಟೆ, ಶಿವಾಜಿನಗರ ಹಾಗೂ ಮಹದೇವಪುರ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಪ್ರಾದೇಶಿಕ ಆಯುಕ್ತರು ತನಿಖಾ ವರದಿಯನ್ನು ಸಲ್ಲಿಸಿದ ನಂತರ, ಅಂದರೆ ಜನವರಿ ೧೫ರ ವೇಳೆಗೆ ಪ್ರಕಟಿಸಲಾಗುವುದು. “ಜನವರಿ ೧೫ರ ವೇಳೆಗೆ, ಚುನಾವಣಾ ಆಯೋಗವು ಈ ಮೂರೂ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಅಂತ್ಯಗೊಳಿಸುವ ಇಡೀ ಪ್ರಕ್ರಿಯೆ ಪೂರ್ಣಗೊಳ್ಳಲಿದೆ,” ಎಂದು ಮಾಹಿತಿ ನೀಡಿದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Karnataka- Inclusion – 12 lakh -new voters – 221 assembly -constituencies.