ರೋಹಿಣಿ ಸಿಂಧೂರಿಗೆ ಬಿಗ್ ರಿಲೀಫ್ : ಅರ್ಜಿದಾರ ಭೂ ಮಾಲೀಕರ ಹೆಸರಿಗೆ ಖಾತೆ ಮಾಡಲು ಕೋರ್ಟ್ ‘ ಡೆಡ್ ಲೈನ್ ‘

 

ಮೈಸೂರು, ಆ.13, 2021 : (www.justkannada.in news ) ಮೈಸೂರಿನ ಚಾಮುಂಡಿ‌ಬೆಟ್ಟದ ತಪ್ಪಲಿನ ಕುರುಬಾರ ಹಳ್ಳಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಹೂಡಿದ್ದ ನ್ಯಾಯಾಂಗ ನಿಂದನೆ ದಾವೆ ಅರ್ಜಿಯಿಂದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹೆಸರು ಕೈಬಿಡಲಾಗಿದೆ.

ವರ್ಗಾವಣೆಗೊಂಡಿರುವ ಕಾರಣ ನ್ಯಾಯಾಂಗ ನಿಂಧನೆ ಅರ್ಜಿಯಿಂದ ಬಿಡುಗಡೆ ಮಾಡುವಂತೆ ಹಿಂದಿನ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾಡಿದ್ದ ಮನವಿಯನ್ನು ಹೈಕೋರ್ಟ್. ಶುಕ್ರವಾರ ಮಾನ್ಯ ಮಾಡಿದೆ. ಈ ಸಂಬಂಧ ರೋಹಿಣಿ ಸಿಂಧೂರಿ ಇಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಇದೇ ವೇಳೆ ಮೈಸೂರಿನ ಹಾಲಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹಾಗೂ ಕಂದಾಯ‌ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರಿಗೆ ನೋಟಿಸ್ ನೀಡಿರುವ ನ್ಯಾಯಾಲಯ. ಆ.24 ರಂದು ಹೈಕೋರ್ಟ್ ಗೆ ಖುದ್ದು ಹಾಜರಾಗಲು ಸೂಚಿಸಿತು . ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಈ ಇಬ್ಬರನ್ನು ಪಾಟಿ ಮಾಡಿದ ಕೋರ್ಟ್ ಈ ಸೂಚನೆ ನೀಡಿತು.

ಆ.25 ರೊಳಗೆ ಸಬೂಬು ಹೇಳದೆ ಅರ್ಜಿದಾರ ಭೂ ಮಾಲೀಕರ ಹೆಸರಿಗೆ ಖಾತೆ ಮಾಡುವಂತೆ ಕೋರ್ಟ್ ತಾಕೀತು. ಇದೇ ವೇಳೆ ಮೈಸೂರು ತಹಸೀಲ್ದಾರ್ ರಕ್ಷಿತ್ ಅವರನ್ನು ತರಾಟೆ ತೆಗೆದುಕೊಂಡ ಕೋರ್ಟ್, ಖಾತೆ ಮಾಡಿಸುವ ವಿಚಾರ ಸಂಪೂರ್ಣ ಫಾಲೋಪ್ ಮಾಡುವಂತೆ ತಾಕೀತು ಮಾಡಿತು. ಜತೆಗೆ ಸೂಚಿಸಿದ ಸಮಯದೊಳಗೆ ಖಾತೆ ಮಾಡಿಕೊಡದಿದ್ದರೆ ಜೈಲಿಗಟ್ಟುವುದಾಗಿ ಕೋರ್ಟ್ ಎಚ್ಚರಿಕೆ ನೀಡಿತು.

key words : Karnataka-high.court-Mysore-kurubarahalli.case-rohini.sindhoori-relief