ಆರೋಗ್ಯ ಇಲಾಖೆ ಯಶ್’ಗೆ ನೋಟಿಸ್ ಜಾರಿ ಮಾಡಿದ್ದೇಕೆ?!

ಬೆಂಗಳೂರು, ಜನವರಿ 13, 2020 (www.justkannada.in): ಆರೋಗ್ಯ ಇಲಾಖೆ ರಾಕಿಂಗ್ ಸ್ಟಾರ್ ಯಶ್ ಗೆ ನೋಟೀಸ್ ನೀಡಿದೆ.

ಕೆಜಿಎಫ್-2 ಚಿತ್ರದ ಟೀಸರ್’ನಲ್ಲಿ ಸಿಗರೇಟ್ ಸೇದಿದ ವಿಚಾರಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗಿದೆ.
ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಕಾಯ್ದೆ-2003 ಅಡಿಯಲ್ಲಿ ನೋಟಿಸ್ ಜಾರಿಯಾಗಿದೆ.

ಟೀಸರ್ ನಲ್ಲಿ ಸಿಗರೇಟ್ ಸೇದುವ ದೃಶ್ಯವಿದ್ದು, ಈ ದೃಶ್ಯ ಯುವಕರನ್ನು ಪ್ರಚೋದಿಸುತ್ತದೆ. ಈ ದೃಶ್ಯ ತೆಗೆಯುವಂತೆ ಸೂಚನೆ ನೀಡಿ ಆರೋಗ್ಯ ಇಲಾಖೆ ನೋಟಿಸ್’ನಲ್ಲಿ ತಿಳಿಸಿದೆ.