ಮಾಜಿ ರಾಜ್ಯಪಾಲ ಹಂಸರಾಜ್ ಭರದ್ವಾಜ್ ನನ್ನ ಪ್ರೇರಕ ಶಕ್ತಿ : ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಧ್ಯಕ್ಷ ಪ್ರೊ.ಕೆ.ಎಸ್.ರಂಗಪ್ಪ ಕಂಬನಿ.

 

ಮೈಸೂರು, ಮಾ.09, 2020 : (www.justkannada.in news) : ಕರ್ನಾಟಕದ ಮಾಜಿ ರಾಜ್ಯಪಾಲ, ಮಾಜಿ ಕೇಂದ್ರ ಸಚಿವ ಹಂಸರಾಜ್ ಭಾರದ್ವಾಜ್ ನಿಧನಕ್ಕೆ ವಿಶ್ರಾಂತ ಕುಲಪತಿ ಹಾಗೂ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಪ್ರೊ.ಕೆ.ಎಸ್.ರಂಗಪ್ಪ ಸಂತಾಪ ಸೂಚಿಸಿದ್ದಾರೆ.

ಕೇಂದ್ರ ಕಾನೂನು ಸಚಿವರಾಗಿ ಗಮನಾರ್ಹ ಸೇವೆ ಸಲ್ಲಿಸಿದ್ದ ಹಂಸರಾಜ್ ಭಾರದ್ವಾಜ್, ಬಳಿಕ ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆ ಸಂದರ್ಭದಲ್ಲಿ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಕುಲಾಧಿಪತಿಗಳಾಗಿ ರಾಜ್ಯದ ವಿಶ್ವವಿದ್ಯಾನಿಲಗಳ ಸರ್ವತೋಮುಖ ಅಭಿವೃದ್ಧಿಗೆ ಭರದ್ವಾಜ್ ಶ್ರಮಿಸಿದ್ದರು ಎಂದು ಪ್ರೊ. ರಂಗಪ್ಪ ತಮ್ಮ ಸಂತಾಪ ಸೂಚಕ ಹೇಳಿಕೆಯಲ್ಲಿ ಸ್ಮರಿಸಿದ್ದಾರೆ.

karnataka-governor-hansraj-bharadhwaj-dead-k.s.rangappa-condolence

ಈ ಹಿಂದೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಅವಧಿ ಹಾಗೂ ಆನಂತರ ಮೈಸೂರು ವಿವಿ ಕುಲಪತಿಯಾಗಿದ್ದ ವೇಳೆ ಕುಲಾಧಿಪತಿಗಳಾದ ಹಂಸರಾಜ್ ಭರದ್ವಾಜ್ ಅವರು ನೀಡಿದ ಸಲಹೆ, ಮಾರ್ಗದರ್ಶನ ಅನನ್ಯವಾದದ್ದು. ಕುಲಪತಿಯಾಗಿ ಕರ್ನಾಟಕ ರಾಜ್ಯ ಮುಕ್ತ ವಿವಿ ಹಾಗೂ ಮೈಸೂರು ವಿವಿಗೆ ಹೊಸ ಕಾಯಕಲ್ಪ ನೀಡಲು ಹಂಸರಾಜ್ ಭರದ್ವಾಜ್ ಅವರೇ ನನಗೆ ಪ್ರೇರಕ ಶಕ್ತಿಯಾಗಿದ್ದರು. ಈ ಎರಡು ವಿವಿಗಳಲ್ಲಿ ಅಭಿವೃದ್ಧಿ ಕಾರ್ಯಗಳು ಜಾರಿಗೊಂಡಿದ್ದರೆ ಅದಕ್ಕೆ ಹಂಸರಾಜ್ ಭರದ್ವಾಜ್ ಅವರೇ ಕಾರಣ ಎಂದು ಪ್ರೊ.ರಂಗಪ್ಪ ಬಣ್ಣಿಸಿದ್ದಾರೆ.

karnataka-governor-hansraj-bharadhwaj-dead-k.s.rangappa-condolence

ಕೆಲ ಸಮಯದ ಹಿಂದೆಯಷ್ಟೆ ದಿಲ್ಲಿಯಲ್ಲಿ ಹಂಸರಾಜ್ ಭರದ್ವಾಜ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೆ. ಆದರೆ ಇದೀಗ ಅವರ ನಿಧನದ ಸುದ್ಧಿ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಪ್ರೊ.ರಂಗಪ್ಪ ಸಂತಾಪ ಸೂಚಕ ಹೇಳಿಕೆಯಲ್ಲಿ ಕಂಬನಿ ಮಿಡಿದಿದ್ದಾರೆ.

key words : karnataka-governor-hansraj-bharadhwaj-dead-k.s.rangappa-condolence