ಕರ್ನಾಟಕ ಬಂದ್: ಬೆಂಗಳೂರಿನ ಟೌನ್ ಹಾಲ್ ಬಳಿ ಪ್ರತಿಭಟನಾನಿರತರು ಪೊಲೀಸರ ವಶಕ್ಕೆ…

kannada t-shirts

ಬೆಂಗಳೂರು,ಡಿಸೆಂಬರ್5,2020(www.justkannada.in):  ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಇಂದು ರಾಜ್ಯಾದ್ಯಂತ ವಿವಿಧ ಕನ್ನಡ ಪರ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದು ಈ ಮಧ್ಯೆ ಬಂದ್ ಬೆಂಬಲಿಸಿ ಬೆಂಗಳೂರಿನ ಟೌನ್ ಹಾಲ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ಕನ್ನಡ ಹೋರಾಟಗಾರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.logo-justkannada-mysore

ಮರಾಠ ಅಭಿವೃದ್ಧಿ ನಿಗಮ ರಚನೆಯ ಸರ್ಕಾರದ ನಡೆಯನ್ನ ಖಂಡಿಸಿ ಒಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆ ಬೆಳಿಗ್ಗೆಯಿಂದಲೇ ವಿವಿಧ ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು ಬೆಂಗಳೂರಿನ ಟೌನ್ ಹಾಲ್ ಬಳಿ ಕನ್ನಡ ಪರ ಹೋರಾಟಗಾರರು ಜಮಾಯಿಸುತ್ತಿದ್ದಾರೆ.Karnataka Bandh-Protest-detained - police -Bangalore -Town Hall

ಈ ಮಧ್ಯೆ ಈಗಾಗಲೇ  ಟೌನ್ ಹಾಲ್ ಬಳಿ ಆಗಮಿಸಿ ಪ್ರತಿಭಟನೆಗೆ ಮುಂದಾಗಿದ್ಧ ಎರಡು ತಂಡವನ್ನ ಪೊಲೀಸರು ಬಂಧಿಸಿದ್ದರು. ಇದೀಗ ಮೂರನೇ ತಂಡ ಧರಣಿಗೆ ಮುಂದಾಗಿದ್ದು ಈ ವೇಳೆ ಧರಣಿನಿರತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಪ್ರತಿಭಟನೆಗಾಗಿ ಕನ್ನಡ ಹೋರಾಟಗಾರರು ಜಮಾಯಿಸುತ್ತಿದ್ದು, ಧರಣಿಗೆ ಮುಂದಾಗುವವರನ್ನ ಪೊಲೀಸರು ಬಂಧಿಸುತ್ತಿದ್ದಾರೆ ಎನ್ನಲಾಗಿದೆ.

Key words:  Karnataka Bandh-Protest-detained – police -Bangalore -Town Hall

website developers in mysore