ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಡಿ.31 ರಂದು ಕರ್ನಾಟಕ ಬಂದ್.

ಬೆಂಗಳೂರು,ಡಿಸೆಂಬರ್,22,2021(www.justkannnada.in):  ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿ ಸರ್ಕಾರಿ ವಾಹನ ಮೇಲೆ ಕಲ್ಲೆಸೆದು ಪುಂಡಾಟ ನಡೆಸಿದ ಎಂಇಎಸ್ ಅನ್ನ ನಿಷೇಧಿಸುವಂತೆ ಆಗ್ರಹಿಸಿ ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ.

ಈ ಕುರಿತು ಬೆಂಗಳೂರಿನಲ್ಲಿ ವಿವಿಧ ಸಂಘಟನೆಗಳ ಜತೆ ಸಭೆ ನಡೆಸಿ ಚರ್ಚಿಸಿದ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಎಂಇಎಸ್ ನಿಷೇಧಿಸುವಂತೆ ಆಗ್ರಹಿಸಿ ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್ ಕರೆನೀಡಲಾಗಿದೆ. ಅಂದು  ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಬಂದ್ ಆಚರಿಸುತ್ತೇವೆ. ರಾಜ್ಯ ಸರ್ಕಾರಕ್ಕೆ ಡಿ.29ಕ್ಕೆ ಡೆಡ್ ಲೈನ್ ನೀಡಲಾಗಿದೆ. ಅಷ್ಟರೊಳಗೆ ಎಂಇಎಸ್ ನಿಷೇಧಿಸಿದರೇ ಬಂದ್ ವಾಪಸ್ ಪಡೆಯುತ್ತೇವೆ ಎಂದು ಮಾಹಿತಿ ನೀಡಿದರು.government-new-guideline-confusion-14-day-bandh

ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸಬೇಕು. ಎಂಇಎಸ್ 70 ವರ್ಷದಿಂದ ದಬ್ಬಾಳಿಕೆ ನಡೆಸುತ್ತಿದೆ. ಬೆಳಗಾವಿಯಲ್ಲಿ ಎಂಇಎಸ್ ಇರಲು ಅಧಿಕಾರ ಇಲ್ಲ. ಎಂಇಎಸ್ ವಿರುದ್ಧ ಹೋರಾಡಿದ ಕನ್ನಡಿಗರನ್ನ ಬಂಧನ ಮಾಡಲಾಗಿದೆ. ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚದ್ದಾರೆ. ಬೆಂಕಿ ಹಚ್ಚಿದ್ದನ್ನ ಸಹಿಸುವುದಿಲ್ಲ. ಬಾವುಟಕ್ಕೆ ಬೆಂಕಿ ಇಟ್ಟರೇ ಕನ್ನಡಿಗರಿಗೆ ಬೆಂಕಿ ಇಟ್ಟದಂತೆ ಭಾಷೆಗೆ ಬೆಂಕಿ ಇಟ್ಟಂತೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.

Key words: Karnataka Bandh – Dec. 31 -demanding -MES ban-Vatal Nagaraj.

ENGLISH SUMMARY…

Vatal Nagaraj calls for Karnataka Bundh on Dec. 31 demanding the Govt. to ban MES
Bengaluru, December 22, 2021 (www.justkannada.in): The Pro-Kannada organizations in the State have called for a Karnataka Bundh on December 31, condemning the vandalizing of freedom fighter Krantiveera Sangolli Rayanna’s statue at Belagavi, and pelting stones on the Karnataka Government bus recently.government-new-guideline-confusion-14-day-bandh
Pro-Kannada activist Vatal Nagaraj held a meeting in Bengaluru today with the leaders of various Pro-Kannada organizations. He informed that they have decided to call for a Karnataka Bundh on December 31, from 6.00 am to 6.00 pm. “We have given a deadline to the State Government, in case if the MES is banned within then we will withdraw our call for bundh,” he informed.
Keywords: Pro-Kannada organizations/ Vatal Nagaraj/ Karnataka Bundh/ December 31