ಅಪಾಯಮಟ್ಟ ಮೀರಿ ಹರಿಯುತ್ತಿರುವ ಕಪಿಲಾ ನದಿ: ಸದ್ಗುರು ಮಹಾದೇವತಾ ಸಂಗಮ ಕ್ಷೇತ್ರ ಮುಳುಗಡೆ…

ಮೈಸೂರು,ಆ,9,2019(www.justkannada.in): ಕಪಿಲಾ ನದಿಗೆ ನೀರು ಹರಿಸಿದ ಪರಿಣಾಮ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ನಂಜನಗೂಡಿನ ಸದ್ಗುರು ಮಹಾದೇವತಾ ಸಂಗಮ ಕ್ಷೇತ್ರ ಮುಳುಗಡೆಯಾಗಿದೆ.

ಸದ್ಯ ಕಬಿನಿ ಅಣೆಕಟ್ಟೆಯಿಂದ 1 ಲಕ್ಷ, ನುಗು ಅಣೆಕಟ್ಟೆಯಿಂದ 10 ಸಾವಿರ ಹಾಗೂ ತಾರಕ ಅಣೆಕಟ್ಟೆಯಿಂದ 15 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು  ಕಪಿಲಾ ನದಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 1.50 ಲಕ್ಷ ಕ್ಯೂಸೆಕ್ ನೀರು ರಿಲೀಸ್ ಮಾಡಲಾಗಿದೆ.

ಕೇರಳದಲ್ಲಿ ಮಳೆ ನೀರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ನೀರು ಬಿಡುಗಡೆ ಮಾಡಲಾಗುತ್ತಿದ್ದು ಕಪಿಲಾ ನದಿ  ಉಕ್ಕಿಹರಿಯುತ್ತಿದೆ. ಹೀಗಾಗಿ ನಂಜನಗೂಡಿನ ಸದ್ಗುರು ಮಹಾದೇವತಾ ಸಂಗಮ ಕ್ಷೇತ್ರ ಮುಳುಗಡೆಯಾಗಿದೆ. ಇನ್ನು ಕಬಿನಿ ಡ್ಯಾಂ ನಿಂದ ನೀರು ಹರಿಸಿದ್ದರಿಂದ ನಂಜನಗೂಡು ವ್ಯಾಪ್ತಿಯ ಹಲವು ಗ್ರಾಮಗಳು ಜಲಾವೃತವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನಡುವೆ ಸುತ್ತೂರು ಬಸ್ ನಿಲ್ದಾಣವೂ ಸಹ ನೀರಿನಿಂದ ಆವೃತವಾಗಿದೆ ಎಂದು ಹೇಳಲಾಗುತ್ತಿದೆ.

Key words:  Kapila River-  flows – danger-Sadguru Mahadevata Sangam – sinks-nanjanagud