ಬಿಸಿಸಿಐ ಅಧ್ಯಕ್ಷ ಸ್ಥಾನದ ರೇಸ್’ನಲ್ಲಿ ಕನ್ನಡಿಗ ರೋಜರ್ ಬಿನ್ನಿ

Promotion

ಬೆಂಗಳೂರು, ಅಕ್ಟೋಬರ್ 08, 2022 (www.justkannada.in): ಬಿಸಿಸಿಐ ನೂತನ ಕಾರ್ಯಕಾರಿ ಸಮಿತಿ ಆಯ್ಕೆಗೆ ಚುನಾವಣಾ ಅಧಿಸೂಚನೆ ಈಗಾಗಲೇ ಹೊರಬಿದ್ದಿದೆ. ಕನ್ನಡಿಗ ರೋಜರ್ ಬಿನ್ನಿ ಅ‍ಧ್ಯಕ್ಷ ಸ್ಥಾನದ ರೇಸ್ ನಲ್ಲಿದ್ದಾರೆ.

ಅಕ್ಟೋಬರ್ 18 ರಂದು ಚುನಾವಣೆ ನಡೆಯಲಿದೆ. ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ. ಬರಿಗೈ ಅಭ್ಯರ್ಥಿಗಳು ಇದೇ 14ರೊಳಗೆ ನಾಮಪತ್ರ ಸಲ್ಲಿಸಬೇಕಿದೆ.

ಸೌರವ್ ಗಂಗೂಲಿ ಐಸಿಸಿ ಅಧ್ಯಕ್ಷರ ರೇಸ್‌ನಲ್ಲಿ ನಿಲ್ಲಲು ಆಸಕ್ತಿ ಹೊಂದಿಲ್ಲ ಎಂಬ ವರದಿಗಳಿವೆ. ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಜಯ್ ಶಾ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯೂ ಕಡಿಮೆ ಇದೆ. ಹೀಗಾಗಿ ಭಾರತದ ಮಾಜಿ ಆಟಗಾರ ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷೀಯ ರೇಸ್ ನಲ್ಲಿದ್ದಾರೆ.

ಮೈದಾನದಲ್ಲಿ ಹೆಚ್ಚು ಆಕರ್ಷಿಸದ ಬಿನ್ನಿ ಭಾರತ ತಂಡಕ್ಕೆ ಆಲ್ ರೌಂಡರ್ ಆಗಿ ಬಂದಿದ್ದರು. ಸ್ಟುವರ್ಟ್ ಬಿನ್ನಿ ಹೆಚ್ಚು ಕಾಲ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.