ಅವಿದ್ಯಾವಂತ ಪೋಷಕರಿಗೆ ಕೀರ್ತಿ ತಂದ ”ಕನ್ನಡತಿ”

ಮೈಸೂರು,ಅಕ್ಟೋಬರ್,19,2020(www.justkannada.in) : ಬಡತನ ಎನ್ನುವುದು ಪ್ರತಿಭೆಯನ್ನು ತಡೆಹಿಡಿಯಲಾರದು ಎನ್ನುವುದಕ್ಕೆ ಸುನೀತಾ ಅವರು ಸ್ನಾತಕೋತ್ತರ ಪದವಿ ಕನ್ನಡ ವಿಷಯದಲ್ಲಿ 7 ಚಿನ್ನದ ಪದಕ, 5 ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ.jk-logo-justkannada-logoಹುಣಸೂರಿನ ನರಸಿಂಹಸ್ವಾಮಿ ಬಡಾವಣೆ ನಿವಾಸಿ ಕೆಂಪೇಗೌಡ, ಕೃಷ್ಣಮ್ಮ ದಂಪತಿಗಳು ಸ್ವಂತ ಭೂಮಿಯಿಲ್ಲದಿದ್ದರೂ, ತಾವು ಅವಿದ್ಯಾವಂತರಾದರೂ ತಮ್ಮ ಮಕ್ಕಳು ವಿದ್ಯಾವಂತರಾಗಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂಬ ಕನಸಿನೊಂದಿಗೆ ಕೂಲಿಯನ್ನೆ ನಂಬಿ ಮಗಳು ಹಾಗೂ ಮಗನಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ನೆಟ್, ಸ್ಲೆಟ್, ಜೆಆರ್ ಎಫ್ ಕಂಪ್ಲೀಟ್

ಪೋಷಕರ ಬೆಂಬಲ, ಉಪನ್ಯಾಸಕರ ಮಾರ್ಗದರ್ಶನವೇ ನನ್ನ ಈ ಸಾಧನೆಗೆ ಕಾರಣ ಎನ್ನುವ ಸುನೀತಾ ಈಗಾಗಲೇ, ನೆಟ್, ಸ್ಲೆಟ್, ಜೆಆರ್ ಎಫ್ ಮುಕ್ತಾಯಗೊಳಿಸಿದ್ದು, ಪಿಎಚ್.ಡಿಗೆ ಗೈಡ್ ಹುಡುಕುತ್ತಿದ್ದೇನೆ ಎಂದು ಸಂತೋಷವ್ಯಕ್ತಪಡಿಸಿದರು.

ಯುಪಿಎಸ್ಸಿ ಪರೀಕ್ಷೆ ಕಂಪ್ಲೀಟ್ ಮಾಡುವುದೇ ನನ್ನ ಗುರಿ

 Kannada,which,brings,fame,uneducated,parents

ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಬೇಕು ಎಂಬ ಗುರಿಯಿದೆ. ಇದಕ್ಕಾಗಿಯೇ ಎಂ.ಎ.ನಲ್ಲಿ ಕನ್ನಡ ವಿಷಯ ಆಯ್ಕೆಮಾಡಿಕೊಂಡೆ. ಯುಪಿಎಸ್ಸಿ ಪರೀಕ್ಷೆಯಲ್ಲಿ ಕನ್ನಡವನ್ನು ಐಚ್ಛಿಕ ವಿಷಯವಾಗಿ ಆಯ್ಕೆಮಾಡಿಕೊಳ್ಳಬೇಕು ಎಂದುಕೊಂಡಿದ್ದೇನೆ. ಈ ಗುರಿಯನ್ನು ಸಾಧಿಸುತ್ತೇನೆ ಎಂಬ ಭರವಸೆಯಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಪೋಷಕರಿಗೆ ಗೌರವ ತರುವಂತೆ ಓದುವುದೇ ನನ್ನ ಕನಸು

ಚಿನ್ನದ ಪದಕದ ನಿರೀಕ್ಷೆಯಿರಲಿಲ್ಲ. ಬಹಳ ಕಷ್ಟದಲ್ಲಿ ಪೋಷಕರು ನನ್ನ ಓದಿಸುತ್ತಿದ್ದು, ಅವರಿಗೆ ಗೌರವ ತರುವಂತೆ ಓದಬೇಕು ಎನ್ನುವುದು ನನ್ನ ಕನಸಾಗಿತ್ತು. ಅದು ಇಂದು ಸಾಕಾರಗೊಂಡಿದೆ ಎನಿಸುತ್ತಿದೆ. ಚಿನ್ನದ ಪದಕಗಳಿಸಿರುವುದಕ್ಕೆ ನನ್ನ ಪೋಷಕರಿಗೆ ತುಂಬಾ ಖುಷಿಯಾಗಿದೆ ಎಂದು ಭಾವುಕರಾದರು.

ಕನ್ನಡದಲ್ಲಿ ಮೂವರಿಗೆ ಚಿನ್ನದ ಪದಕ 

ಮೈಸೂರು ವಿವಿ ಘಟಿಕೋತ್ಸವದಲ್ಲಿ ಸೋಮವಾರ ಸ್ನಾತಕೋತ್ತರ ಕನ್ನಡ ವಿಷಯದಲ್ಲಿ ಸುನೀತಾ(7 ಚಿನ್ನದ ಪದಕ,5 ನಗದು ಬಹುಮಾನ), ಪಿ.ರೇಣುಕಾ(6ಚಿನ್ನದ ಪದಕ, 5ನಗದು ಬಹುಮಾನ, ಕೆ.ಜೆ.ಕೆಂಪರಾಜು(6 ಚಿನ್ನದ ಪದಕ, 4 ನಗದು ಬಹುಮಾನ) ಪಡೆದು ಸಂತೋಷವ್ಯಕ್ತಪಡಿಸಿದರು.

key words : Kannada-which-brings-fame-uneducated-parents