ಸೂರ್ಯ ಚಂದ್ರ ಇರುವವರೆಗೂ ಕನ್ನಡ ಬೆಳೆಯುತ್ತಲೇ ಇರುತ್ತೆ- ಸಿಎಂ ಬಸವರಾಜ ಬೊಮ್ಮಾಯಿ.

ಹಾವೇರಿ,ಜನವರಿ,6,2023(www.justkannada.in):  ಕನ್ನಡ ಪರಂಪರೆ ಅತ್ಯಂತ ಶ್ರೀಮಂತವಾಗಿದೆ. ಸೂರ್ಯ ಚಂದ್ರ ಇರುವವರೆಗೂ ಕನ್ನಡ ಬೆಳೆಯುತ್ತಲೇ ಇರುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ನುಡಿದರು.

ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ಸಾಹಿತ್ಯ ಲೋಕಕ್ಕೆ ಸಮ್ಮೇಳನಾಧ್ಯಕ್ಷ  ದೊಡ್ಡರಂಗೇಗೌಡರ ಕೊಡುಗೆ ಅಪಾರ. ಎಲ್ಲಾರಂಗದಲ್ಲೂ ಯಶಸ್ಸು ಪಡೆದವರು ರಂಗೇಗೌಡರು. ಕನ್ನಡದ ತೇರನ್ನು ಇಲ್ಲಿವರೆಗೂ ಎಳೆದುಕೊಂಡು ಬಂದಿದ್ದಾರೆ. ದೊಡ್ಡ ಗುಣವಿರುವ ಸಾಹಿತಿ ದೊಡ್ಡರಂಗೇಗೌಡರು. ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಪಾರ. ಸಿನಿಮಾ ಹಾಗೂ ಕಲಾ ರಂಗದಲ್ಲೂ ಹೆಸರು ಮಾಡಿದವರು ಎಂದು ಹೊಗಳಿದರು.

ಇದು  ಔಚಿತ್ಯಪೂರ್ಣ ಕಾರ್ಯಕ್ರಮ.  ಜಗತ್ತಿನಲ್ಲೇ ಅತ್ಯಂತ ಪ್ರಾಚೀನ ಭಾಷೆ ಕನ್ನಡ. ಸಂಸ್ಕೃತಿಯಲ್ಲಿ ಕನ್ನಡ ಶ್ರೇ಼ಷ್ಠ. ಕನ್ನಡ ಸಾಹಿತ್ಯ ಬದುಕು ಕಟ್ಟಿಕೊಟ್ಟಿದೆ.  ಸೂರ್ಯ ಚಂದ್ರ ಇರುವವರೆಗೂ ಕನ್ನಡ ಬೆಳೆಯುತ್ತಲೇ ಇರುತ್ತದೆ.  ಕನ್ನಡ ಬೆಳೆಯಲು ಪ್ರತಿಯೊಬ್ಬರ ಕೊಡುಗೆ ಮುಖ್ಯ.  ಕನ್ನಡ ಸದಾಕಾಲ ಬೆಳೆಯುತ್ತಿರಬೇಕು.  ಕನ್ನಡ 8 ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಏಕೈಕ ಭಾಷೆ. ಕನ್ನಡ ಪರಂಪರೆ ಅತ್ಯಂತ ಶ್ರೀಮಂತವಾಗಿದೆ ಎಂದರು.

Key words: Kannada- will -continue – grow – long – CM- Basavaraja Bommai.