ಈ ಶುಕ್ರವಾರ ಚಿತ್ರಮಂದಿರಕ್ಕೆ ಬರ್ತಿದ್ದಾರೆ ಬಿಲ್’ಗೇಟ್ಸ್ !

ಬೆಂಗಳೂರು, ಫೆಬ್ರವರಿ 05, 2019 (www.justkannada.in): ಟೈಟಲ್ ಮೂಲಕ ಕ್ರೇಜ್ ಹುಟ್ಟುಹಾಕಿರುವ ಬಿಲ್ಗೇಟ್ಸ್ ಚಿತ್ರ ಫೆಬ್ರವರಿ 7ಕ್ಕೆ ಬಿಡುಗಡೆಯಾಗುತ್ತಿದೆ.

ಚಿಕ್ಕಣ್ಣ, ಶಿಶಿರ್ ಶಾಸ್ತ್ರಿ ಅಭಿನಯದ ಬಿಲ್ಗೇಟ್ಸ್ ಚಿತ್ರ ಎಲ್ಲರ ಗಮನ ಸೆಳೆಯುತ್ತಿದೆ. ಟೀಸರ್ ಮೂಲಕ ಸಣ್ಣ ಝಲಕ್ ತೋರಿರುವ ಈ ಚಿತ್ರ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟಿಸಿದೆ.

ಶ್ರೀನಿವಾಸ. ಸಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಕುರಿ ಪ್ರತಾಪ್, ಬ್ಯಾಂಕ್ ಜನಾರ್ಧನ್, ವಿ. ಮನೋಹರ್ ಚಿತ್ರದಲ್ಲಿ ನಟಿಸಿದ್ದಾರೆ. ರಶ್ಮಿತ ರೋಜಾ, ಅಕ್ಷರಾ ರೆಡ್ಡಿ ಚಿತ್ರದಲ್ಲಿ ನಾಯಕಿಯರಾಗಿ ಮಿಂಚಿದ್ದಾರೆ.

ಕೆಜಿಎಫ್ ಖ್ಯಾತಿಯ ಕಲಾ ನಿರ್ದೇಶಕ ಶಿವಕುಮಾರ್ ಈ ಚಿತ್ರಕ್ಕೆ ಕಲಾ ನಿರ್ದೇಶನ ಮಾಡಿದ್ದು, ನೊಬಿನ್ ಪೌಲ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.