ಪೋಸ್ಟ್ ಕೊರೊನಾ ಸಕ್ಸಸ್: 25 ದಿನ ಪೂರೈಸಿದ ಆ್ಯಕ್ಟ್ 1978

ಬೆಂಗಳೂರು, ಡಿಸೆಂಬರ್ 17, 2020 (www.justkannada.in): ಪೋಸ್ಟ್ ಕೊರೊನಾ ದಿನಗಳಲ್ಲಿ ಬಿಡುಗಡೆಯಾದ ಚಿತ್ರ ಆ್ಯಕ್ಟ್ 1978 ಯಶಸ್ಸು ಗಳಿಸಿದ ಖುಷಿಯಲ್ಲಿದೆ!

ನವೆಂಬರ್ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದ ಚಿತ್ರ ಯಶಸ್ವಿಯಾಗಿ 25 ದಿನ ಪೂರೈಸಿದೆ.
ಚಿತ್ರದ ನಿರ್ದೇಶಕ ಮಂಸೋರೆ ಸಾಮಾಜಿಕ ಜಾಲತಾಣದಲ್ಲಿ ಈ ಖುಷಿಯನ್ನು ಹಂಚಿಕೊಂಡಿದ್ದಾರೆ.

”ನಿಮ್ಮೆಲ್ಲರ ಪ್ರೀತಿ, ನಮ್ಮನ್ನು ಈ ಮೈಲಿಗಲ್ಲು ತಲುಪುವಂತೆ ಮಾಡಿದೆ. ಎಲ್ಲಾ ಪ್ರೇಕ್ಷಕರಿಗೂ ತುಂಬು ಹೃದಯದ ಧನ್ಯವಾದಗಳು.” ಎಂದು ಟ್ವಿಟ್ಟರ್ ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.