ಕನ್ನಡ ಭಾಷೆಯನ್ನ ಹತ್ತಿಕ್ಕುವ ಹುನ್ನಾರ ನಡೆದಿದೆ-ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ…

ಬೆಂಗಳೂರು,ಫೆಬ್ರವರಿ,4,2021(www.justkannada.in):  ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆದ ಏರ್ ಶೋ ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಇದೀಗ ಈ ಕುರಿತು ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ವಿಧಾನಸೌಧದಲ್ಲಿ ಇಂದು ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಇತ್ತೀಚೆಗೆ ಕೇಂದ್ರದ ಕಾರ್ಯಕ್ರಮಗಳು ರಾಜ್ಯದಲ್ಲಿ ನಡೆಯುತ್ತಿದೆ. ಕಾರ್ಯಕ್ರಮಗಳಲ್ಲಿ ಕನ್ನಡ ಬಳಕೆ ಕಡೆಗಣನೆಯಾಗ್ತಿದೆ. ಕನ್ನಡಕ್ಕೆ ಅವಮಾನ ಮಾಡ್ತಿರುವುದು ಸ್ಪಷ್ಟವಾಗಿದೆ. ಕನ್ನಡ ಭಾಷೆಯನ್ನ ಹತ್ತಿಕ್ಕುವ ಹುನ್ನಾರವಿದು. ಹೀಗಾಗಿ ಕೇಂದ್ರ ಮತ್ತು ರಾಜ್ಯಕ್ಕೆ ಆಗ್ರಹ ಮಾಡುತ್ತೇನೆ. ಈ ರೀತಿ ಬೆಳವಣಿಗೆಯಾದಾಗ ಗಮನಹರಿಸಿ. ನಿಮ್ಮನ್ನ ನೀವು ದೂರಿಕೊಳ್ಳಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೆಹಲಿ ರೈತರ ಪ್ರತಿಭಟನೆ ವಿಚಾರ: ಕೂಡಲೇ ಕೇಂದ್ರ ಎಚ್ಚೆತ್ತುಕೊಳ್ಳುವುದು ಸೂಕ್ತ…

ದೆಹಲಿ ರೈತರ ಪ್ರತಿಭಟನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ವಿದೇಶದ ಕೆಲವರು ಹೇಳಿಕೆ ನೀಡಿದ್ದಾರೆ. ರೈತರ ಬಗೆಗಿನ ಹೇಳಿಕೆ ನಾನು ಚರ್ಚೆ ಮಾಡೋದಿಲ್ಲ. ಉತ್ತರ ಭಾರತದಲ್ಲಿ ನಿರಂತರ ಪ್ರತಿಭಟನೆ ನಡೆಯುತ್ತಿದೆ. ಪ್ರಧಾನಿಯವರಿಗೆ ನಾನು ಮನವಿ ಮಾಡಿದ್ದೇನೆ. ಈಗಲೂ ಮನವಿ ಮಾಡುತ್ತೇನೆ. ರೈತ ಸಂಘಟನೆಗಳ ಜೊತೆ ಚರ್ಚಿಸಬೇಕು. ರೈತರ ಮನವೊಲಿಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.Kannada language- Disregard-Former CM -HD Kumaraswamy- outrage.

ಹಾಗೆಯೇ ರೈತರು ಬರದಂತೆ ರಸ್ತೆಯಲ್ಲ ಮೊಳೆ ಹೊಡೆದು ಬ್ಯಾರಿಕೇಡ್ ಹಾಕಿದ ವಿಚಾರಕ್ಕೆ ಆಕ್ಷೇಪಿಸಿದ ಹೆಚ್.ಡಿಕೆ, ರಸ್ತೆಯಲ್ಲಿ ಮಳೆ ಹೊಡೆದಿದ್ದು ಸರಿಯಲ್ಲ. ಇದು ಬಿಜೆಪಿ ಮೇಲೆ ದುಷ್ಪರಿಣಾಮ ಬೀರಲಿದೆ. ಕೂಡಲೇ ಕೇಂದ್ರ ಎಚ್ಚೆತ್ತುಕೊಳ್ಳುವುದು ಸೂಕ್ತ ಎಂದು ಒತ್ತಾಯಿಸಿದರು.

Key words: Kannada language- Disregard-Former CM -HD Kumaraswamy- outrage.