ಕುಪ್ಪಳ್ಳಿಯಿಂದ ಆರಂಭವಾಗಿರುವ ಕನ್ನಡದ ಕಹಳೆ ನಾಡಿನಾದ್ಯಂತ ಮೊಳಗಬೇಕಿದೆ- ಸಂಗೀತ ನಿರ್ದೇಶಕ ಹಂಸಲೇಖ.

ಶಿವಮೊಗ್ಗ,ಜೂನ್,15,2022(www.justkannada.in): ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಕುವೆಂಪು , ಬಸವಣ್ಣ ಸೇರಿದಂತೆ ಹಲವು ಮಹನೀಯರಿಗೆ ಅಪಮಾನವಾಗಿದೆ. ಇದನ್ನ ಸರಿಪಡಿಸಬೇಕು ಎಂದು ಒತ್ತಾಯಿಸಿ ಇಂದು ಶಿವಮೊಗ್ಗದ ತೀರ್ಥಹಳ್ಳಿ ತಾಲ್ಲೂಕಿನ ಕವಿಶೈಲದಿಂದ ಪಾದಯಾತ್ರೆ ಆರಂಭವಾಗಿದೆ.

ಪರಿಷ್ಕೃತ ಪಠ್ಯಪುಸ್ತಕಗಳನ್ನು ಹಿಂಪಡೆದು ಈ ಹಿಂದಿನ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯ ಪಠ್ಯಗಳನ್ನೇ ಮುಂದುವರಿಸಬೇಕೆಂದು ಒತ್ತಾಯಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಪಾದಯಾತ್ರೆ ಆರಂಭಗೊಂಡಿದ್ದು, ಈ ಪಾದಯಾತ್ರೆಯಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಪಾಲ್ಗೊಂಡಿದ್ದಾರೆ.

ಈ ವೇಳೆ ಮಾತನಾಡಿರುವ ಅವರು, ಈ ಹಿಂದೆ ಗೋಕಾಕ್ ಚಳುವಳಿ ನಡೆದಿತ್ತು. ಈಗ ಕುಪ್ಪಳ್ಳಿಯಿಂದ ಕನ್ನಡದ ಕಹಳೆ ಆರಂಭವಾಗಿದೆ ಇದು ನಾಡಿನಾದ್ಯಂತ ಮೊಳಗಬೇಕಿದೆ. ನಮ್ಮ ನಾಡು, ನಾಡಗೀತೆ ಎರಡಕ್ಕೂ ಅವಮಾನವಾಗಿದೆ. ಹೀಗಾಗಿ ಇದರ ವಿರುದ್ಧ ನಿರಂತರ ಹೋರಾಟ ನಡೆಯಬೇಕಿದೆ ಎಂದು ಹೇಳಿದ್ದಾರೆ.

ಕುವೆಂಪು ಅಂದ್ರೆ ಕನ್ನಡ, ಬಸವಣ್ಣ ಅಂದ್ರೆ ಕರ್ನಾಟಕ. ಈಗ ಅವರುಗಳಿಗೇ ಕುತ್ತು ಬಂದಿದೆ ಅಂದಮೇಲೆ ನಾವಿದ್ದು ಮಾಡುವುದೇನು..? ಎಂದು ಪ್ರಶ್ನಿಸಿರುವ ಸಂಗೀತ ನಿರ್ದೇಶಕ ಹಂಸಲೇಖ, ಕನ್ನಡಕ್ಕೆ ಕವಿಶೈಲವೇ  ಗುರಿವನ ಮನೆ   ತಮಿಳಿಗರ ರೀತಿ ನಾವು ಭಾಷಾಭಿಮಾನ  ಬೆಳೆಸಿಕೊಳ್ಳಬೇಕು. ನಾವು ಭಾಷಾಂತರು ಎಂದರೂ ಸರಿ. ಈ ವಿಚಾರದಲ್ಲಿ ನಾವು ತಮಿಳಗರನ್ನ ಅನಸರಿಸಬೇಕು.  ನಮ್ಮದು ನಾಡಗೀತೆ ಅಲ್ಲ ನಾಡೇ ಒಂದು ಗೀತೆ ಎಂದು ನುಡಿದರು.

Key words:   Kannada – Kuppalli -Music Director -Hansalekha.