ಅಫ್ಘಾನಿಸ್ತಾನದಲ್ಲಿ ಸಿಲುಕಿದ ಕನ್ನಡದ ಐಪಿಎಸ್ ಅಧಿಕಾರಿ.

ಕಾಬೂಲ್,ಆಗಸ್ಟ್,21,2021(www.justkannada.in):  ಅಫ್ಘಾನಿಸ್ಥಾನ ತಾಲಿಬಾನ್ ವಶವಾಗಿದ್ದು, ಅಲ್ಲಿ ಉಗ್ರರ ಅಟ್ಟಹಾಸ ಮಿತಿ ಮೀರುತ್ತಿದೆ. ಈ ಮಧ್ಯೆ ಅಫ್ಘನ್ ನಲ್ಲಿ ಸಿಲುಕಿರುವ ಭಾರತ ದೇಶದ  ಜನರನ್ನ ಕೇಂದ್ರ ಸರ್ಕಾರ ಕರೆತರಲು ವ್ಯವಸ್ಥೆ ಮಾಡಿದೆ.

ಈ ನಡುವೆ ಕನ್ನಡದ ಐಪಿಎಸ್ ಅಧಿಕಾರಿಯೊಬ್ಬರು ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದಾರೆ. ಕಾಬೂಲ್ ನಲ್ಲಿ ಭದ್ರತಾ ವಿಭಾಗದ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸವಿತಾ ಹಂದೆ ಎಂಬುವವರು ಅತಂತ್ರರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸವಿತಾ ಹಂದೆ ಅವರು ಹೊಳೇನರಸಿಪುರ, ಬೀದರ್, ಉಡುಪಿ, ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬೆಂಗಳೂರಿನಲ್ಲಿ ಆಡಳಿತ ವಿಭಾಗದ ಡಿಸಿಪಿಯಾಗಿ ಕೆಲಸ ಮಾಡಿದ್ದರು. 2000ರಲ್ಲಿ  ಬಡ್ತಿ ಪಡೆದು ಕೇಂದ್ರ ಸೇವೆಗೆ ನಿಯೋಜನೆಗೊಂಡಿದ್ದರು ಎನ್ನಲಾಗಿದೆ. ಸವಿತಾ ಹಂದೆ ಅವರು ಈಗಿನ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್, ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್ ಅವರ ಸಹದ್ಯೋಗಿಯಾಗಿದ್ದರು ಎನ್ನಲಾಗಿದೆ.

ENGLISH SUMMARY…

IPS officer of Karnataka stuck in Afghanistan
Kabul, August 21, 2021 (www.justkannada.in): Talibans have conquered Afghanistan and their atrocities have become intolerable. The government of India has made arrangements to bring back Indians who are stuck in Afghanistan.
It is learnt that an IPS officer from Karnataka is also stuck in Afghanistan. According to sources, an officer named Savitha Hande, who was working as an officer in the security division in Kabul is stuck there.
Savitha Hande had performed duty at various levels in several places including Holenarasipura, Bidar, Udupi, and Bengaluru. She also has carried out duty as the DCP in Administration Division in Bengaluru. She was promoted in the year 2000 to Central services. She was a colleague of the present Bengaluru Police Commissioner Kamal Pant, Railway ADGP Bhaskar Rao.
Keywords: Karnataka IPS officer/ Savitha Hande/ stuck/ Afghanistan

Key words: Kannada -IPS -officer -caught – Afghanistan.