ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಕನ್ನಡ ನಾಮಫಲಕ ಮಾಯ : ಕಸಾಪ ತೀವ್ರ ಆಕ್ಷೇಪ…

ಉಡುಪಿ, ಡಿಸೆಂಬರ್,1,2020(www.justkannada.in):  ಉಡುಪಿ ಶ್ರೀ ಕೃಷ್ಣ ಮಠದ ಮುಖದ್ವಾರದಲ್ಲಿನ ಕನ್ನಡ ನಾಮಫಲಕ ತೆಗೆದು ಸಂಸ್ಕೃತ ಮತ್ತು ತುಳು ಭಾಷೆ ನಾಮಫಲಕ ಹಾಕಲಾಗಿದ್ದು, ಇದಕ್ಕೆ  ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದೆ.logo-justkannada-mysore

ಉಡುಪಿಯ ಪ್ರಸಿದ್ಧ ಕೃಷ್ಣ ಮಠದಲ್ಲಿ ಇದುವರೆಗೂ ಇದ್ದ ಕನ್ನಡ ಫಲಕವನ್ನು ತೆಗೆದು ಹಾಕಿ ತುಳು ಮತ್ತು ಸಂಸ್ಕೃತಿ ಭಾಷೆಯಲ್ಲಿ ಬರೆಯಲಾದ ಹೊಸ ಫಲಕವನ್ನು ಹಾಕಲಾಗಿದೆ. ಮಠದ ಮಹಾದ್ವಾರದ ಫಲಕದಲ್ಲಿ ಇದ್ದಕ್ಕಿದ್ದಂತೆ ಕನ್ನಡ ಮಾಯವಾಗಿದ್ದು, ಶ್ರೀ ಕೃಷ್ಣ ಮಠ, ರಜತಪೀಠ ಪುರಂ ಎಂದು ಸಂಸ್ಕೃತ, ತುಳುವಿನಲ್ಲಿ ಬರೆದ ಹೊಸ ಫಲಕವನ್ನು ಅಳವಡಿಸಲಾಗಿದೆ.

ಈವರೆಗೆ ಕನ್ನಡ ಫಲಕವೇ ಇತ್ತು. ಕೃಷ್ಣಮಠ ಎಂದು ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಬರೆಯಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಫಲಕ ಬದಲಾವಣೆ ಮಾಡಲಾಗಿದ್ದು, ಇದೀಗ ಇದು ಚರ್ಚೆಗೆ ಗ್ರಾಸವಾಗಿದೆ. ಮಠದಲ್ಲಿ ಕನ್ನಡ ಕಡೆಗಣನೆಗೆ  ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ತೀವ್ರ  ಆಕ್ಷೇಪ ವ್ಯಕ್ತಪಡಿಸಿದೆ. ನಾಮಫಲಕದಲ್ಲಿ ಕನ್ನಡ ಭಾಷೆಯನ್ನು ತೆಗೆದು ಹಾಕಿರುವುದು ಸರಿಯಾದ ಕ್ರಮವಲ್ಲ. ಕನ್ನಡ ನಾಡಿನಲ್ಲಿ ಮೊದಲು ಕನ್ನಡಕ್ಕೆ ಆದ್ಯತೆ ನೀಡಬೇಕು. ನಾಮ ಫಲಕದಲ್ಲಿ ಮೊದಲು ಕನ್ನಡ ಇರಬೇಕು. ಆನಂತರ ಇತರ ಭಾಷೆಗಳು. ಒಂದು ಧಾರ್ಮಿಕ ಸಂಸ್ಥೆಯು ಭಾಷೆಗಳ ನಡುವೆ ಕಂದಕ ಸೃಷ್ಟಿಸುವುದು ಸರಿಯಲ್ಲ ಎಂದು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ  ಹೇಳಿದ್ದಾರೆ.

English summary….

KSP alleges disregard to Kannada by Udupi Sri Krishna Math
Udupi, Dec. 1, 2020 (www.justkannada.in): The Udupi District Kannada Sahitya Parishath has strongly objected the replacement of Kannada nameplate displayed in the main entrance of the Sri Krishna Math in Udupi with Sanskrit and Tulu language nameplate.Kannada- disregard –Udupi- Sri Krishna Math- Kasapa - severe condemnation.
A nameplate in Kannada language was displayed at the main entrance of the famous Udupi Sri Krishna Math. But all of a sudden it has been replaced with a nameplate in Sanskrit and Tulu languages.
The Udupi District Karnataka Sahitya Parishath President Neelavara Surendra Adiga has expressed his dissatisfaction about the sudden development and has informed that Kannada should be given first preference followed by other languages, whereas the temple authorities have removed Kannada from the nameplate.
Keywords: Udupi Sri Krihsna Math/ Kannada/ KSP

Key words: Kannada- disregard –Udupi- Sri Krishna Math- Kasapa – severe condemnation.