‘ಕಾನೂನು‌ ಎಲ್ಲರಿಗೂ ಒಂದೇ ಇರಬೇಕು: ದುರ್ದೈವ ಈ ಸರ್ಕಾರದಲ್ಲಿ ಅದು ಆಗುತ್ತಿಲ್ಲ-ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ…

kannada t-shirts

ಕಲಬುರಗಿ,ಸೆ,6,2019(www.justkannada.in): ‘ಕಾನೂನು‌ ಎಲ್ಲರಿಗೂ ಒಂದೇ ಇರಬೇಕು:  ಆದರೆ ದುರ್ದೈವ ಈ ಸರ್ಕಾರದಲ್ಲಿ ಅದು ಆಗುತ್ತಿಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ  ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದರು.

ಇಡಿ‌ ಅಧಿಕಾರಿಗಳಿಂದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ‌ ವಿಚಾರ ಕುರಿತು ಕಲ್ಬುರ್ಗಿಯಲ್ಲಿ ಮಾತನಾಡಿದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ , ಅವರಿಗೇ ಬೇಕಾದ ಉತ್ತರ ಕೊಡುತ್ತಿಲ್ಲ ಅಂತಾ ಡಿಕೆಶಿ ಬಂಧನವಾಗಿದೆ ಅನಿಸುತ್ತೆ’ ‘ಕಾನೂನು‌ ಎಲ್ಲರಿಗೂ ಒಂದೇ ಇರಬೇಕು, ಆದರೇ ದುರ್ದೈವ ಈ ಸರ್ಕಾರದಲ್ಲಿ ಅದು ಆಗುತ್ತಿಲ್ಲ’. ‘ಡಿ.ಕೆ.ಶಿವಕುಮಾರ್ ನಾಲ್ಕು ದಿನ ಅಲ್ಲೇ ಇದ್ದು ವಿಚಾರಣೆಗೆ ಹಾಜರಾಗಿದ್ದಾರೆ’. ‘ಆದರೂ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿಲ್ಲ ಅಂತಾ ಅಂದ್ರೆ ಏನರ್ಥ? ಎಂದು ಪ್ರಶ್ನಿಸಿದರು.

‘ಡಿ.ಕೆ.ಶಿವಕುಮಾರ್ ಕಾಂಪ್ರಮೈಸ್ ಆಗ್ತಿಲ್ಲ ಅಂತಾ ಬಂಧಿಸಲಾಗಿದೆ ಎಂಬುದು ನನ್ನ‌ ಅಭಿಪ್ರಾಯ’. ‘ಐಟಿ’ ರೇಡ್ ಆಗಿರೋದು, ‘ಇಡಿ’ ರೇಡ್ ಆಗಿಲ್ಲ ಆದರೆ ಬಂಧನ ಮಾಡಿರೋದು ‘ಇಡಿ’. ‘ದೇಶದ ಸಂವಿಧಾನಕ್ಕೆ ನಾವು ತಲೆ ಬಾಗ್ತೀವಿ, ಡಿಕೆಶಿ ಕಾನೂನು ಹೋರಾಟ ಮಾಡ್ತಿದಾರೆ’. ‘ನಾವೂ ಕೇಂದ್ರ ಸರ್ಕಾರದ ತುಘಲಕ್ ದರ್ಬಾರದ ಬಗ್ಗೆ ಹೋರಾಟ ಮಾಡಿ ಜನರಲ್ಲಿ ಅರಿವು ಮೂಡಿಸುತ್ತೇವೆ’. ‘ಐಟಿ, ಇಡಿಯಂತಹ ತನಿಖಾ ಸಂಸ್ಥೆಗಳನ್ನು ಬಳಸಿ ವಿಪಕ್ಷಗಳನ್ನು ತುಳಿಯಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

Key words: kalburgi-law – same –everyone-not happening -Former minister- Priyank Kharge

 

website developers in mysore