ಕಾಲೇಜಿಗೆ ನುಗ್ಗಿ ಏರ್ ಗನ್ ತೋರಿಸಿ ಬೆದರಿಕೆ ಹಾಕಿದ್ಧ ಮೂವರು ಆರೋಪಿಗಳು ಅರೆಸ್ಟ್.

ಕಲಬುರಗಿ,ಅಕ್ಟೋಬರ್,29,2021(www.justkannada.in):  ಕಾಲೇಜಿಗೆ ನುಗ್ಗಿ ಏರ್ ಗನ್ ತೋರಿಸಿ ವಿದ್ಯಾರ್ಥಿಗಳಿಗೆ ಸಿನಿಮಾ ಸ್ಟೈಲ್ ನಲ್ಲಿ ಬೆದರಿಕೆ ಹಾಕಿದ್ಧ ಮೂವರು ದುಷ್ಕರ್ಮಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿರುವ ರಾಮಮನೋಹರ ಲೋಹಿಯಾ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಆಳಂದ ಪಟ್ಟಣದ ಅಮೀರ್ ಸೊಹೇಲ್, ಬಶೀರ್​ ಅಹ್ಮದ್ ಮತ್ತು ಅಮೇನ್ ಪಟೇಲ್  ಬಂಧಿತರು. ಆಳಂದ ಪಟ್ಟಣದಲ್ಲಿ ಕೆಲ ವಿದ್ಯಾರ್ಥಿಗಳು ಗಲಾಟೆ ಮಾಡಿಕೊಂಡಿದ್ದರು. ಗಲಾಟೆ ಮಾಡಿದವರು ಡಾ.ರಾಮ್ ಮನೋಹರ ಲೋಹಿಯಾ ಕಾಲೇಜು ವಿದ್ಯಾರ್ಥಿಗಳು ಅಂತಾ ತಿಳಿದು ಕಾಲೇಜಿಗೆ  ನುಗ್ಗಿದ ಮೂವರು ದುಷ್ಕರ್ಮಿಗಳು ಈ ರೀತಿ ಏರ್ ಗನ್ ತೋರಿಸಿ ಬೆದರಿಕೆ ಹಾಕಿದ್ದಾರೆ.

ಕಾಲೇಜಿನ ದ್ವಿತೀಯ ಪಿಯು ವಿಜ್ಞಾನ ವಿಭಾಗದ ಕೋಣೆಗೆ ನುಗ್ಗಿ, ಏರ್​​ ಗನ್ ತೋರಿಸಿ ಭೀತಿ ಹುಟ್ಟಿಸಿದ್ದ ಈ ಮೂವರನ್ನು ಬಂಧಿಸಲಾಗಿದೆ.  ಕಾಲೇಜಿನ ಕೋಣೆಗೆ ನುಗ್ಗಿ ಬೆದರಿಕೆ ಹಾಕಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: kalburgi—accused- threatening – air gun – college-arrest