ನಾಡಿನ ಶ್ರೇಷ್ಠ ಸಂತರಲ್ಲಿ ಕೈವಾರ ತಾತಯ್ಯ ಒಬ್ಬರು: ಎಚ್.ಎ.ವೆಂಕಟೇಶ್

ಮೈಸೂರು, ಮಾರ್ಚ್ 28, 2021: ಶ್ರೀ ಯೋಗಿ ನಾರಾಯಣ ಯತೀಂದ್ರರ ಪ್ರಚಾರ ಸಭಾದಿಂದ ಕೈವಾರ ತಾತಯ್ಯನವರ 295 ನೇ ವರ್ಷದ ಜಯಂತಿ ಸಮಾರಂಭ ಆಯೋಜಿಸಲಾಗಿತ್ತು.

ಕೈವಾರ ತಾತಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಮೈಲಾಕ್ ಮಾಜಿ ಅಧ್ಯಕ್ಷ ಹೆಚ್ ಎ ವೆಂಕಟೇಶ್ ಈ ನಾಡಿನ ಶ್ರೇಷ್ಠ ಸಂತರಲ್ಲಿ ಕೈವಾರ ತಾತಯ್ಯನವರು ಪ್ರಮುಖರು. ಮನುಕುಲದ ಬಗ್ಗೆ ಚಿಂತಿಸಿದ ಮಹಾನ್ ಸಂತರು ಎಂದು ಸ್ಮರಿಸಿದರು.
ಪ್ರಕೃತಿಯ ಅವಿಭಾಜ್ಯ ಅಂಗವಾಗಿರುವ ಮಾನವ ಅದನ್ನು ಪೂಜಿಸದೆ ಸ್ವೇಚ್ಛಾಚಾರಕ್ಕೆ ಬಳಸಿಕೊಂಡರೆ ಆಗುವ ಅನಾಹುತಗಳನ್ನು ಆಡುಭಾಷೆಯಲ್ಲಿ ಕಟ್ಟಿಕೊಟ್ಟಿರುವ ಭವಿಷ್ಯವಾಣಿಯು ಪ್ರಸ್ತುತ ಸ್ಥಿತಿಯಲ್ಲಿ ವಿಶ್ಲೇಷಣೆಗೆ ಒಳಗಾಗುವ ಅವಶ್ಯಕತೆ ಇದೆ ಎಂದರು. ಮಾನವತಾವಾದದ ಪ್ರತಿನಿಧಿಯಾಗಿರುವ ಕೈವಾರ ತಾತಯ್ಯ ಮನುಷ್ಯ ಜನ್ಮ ಪ್ರಕೃತಿಯನ್ನು ಆರಾಧಿಸಿದ ಹೊರತು ಅನುಭವಿಸಬೇಕಾಗಿ ಇರುವ ಸಮಸ್ಯೆಗಳನ್ನು ಶತಮಾನಗಳ ಹಿಂದೆಯೇ ಸೂಚಿಸಿರುವುದು ಅವರ ಭವಿಷ್ಯವಾಣಿಯ ದೈವತ್ವವನ್ನು ತಿಳಿಸುತ್ತದೆ.ಇಂತಹ ಜ್ಞಾನಿಗಳ ವಿಚಾರಧಾರೆಗಳನ್ನು ಪ್ರಸ್ತುತ ಶಿಕ್ಷಣದ ಪಠ್ಯಗಳಲ್ಲಿ ಅಳವಡಿಸಬೇಕಾಗಿದೆ ಎಂದು ಹೇಳಿದರು.

ಕೈವಾರ ತಾತಯ್ಯನವರ ಜಯಂತಿಯನ್ನು ರಾಜ್ಯದಲ್ಲಿ ಪ್ರಪ್ರಥಮವಾಗಿ ಆಚರಿಸಲು ಪ್ರೇರಣೆ ನೀಡಿದ ಕೈವಾರ ಶ್ರೀಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ. ಎಂ ಆರ್ ಜಯರಾಂ ಅವರನ್ನು ಸ್ಮರಿಸಿದರು.
ಸಮಾರಂಭವನ್ನು ಉದ್ಯಮಿ ಡಿ ಕೀರ್ತಿಕುಮಾರ್ ಉದ್ಘಾಟಿಸಿದರು. ಸಂಘದ ಅಧ್ಯಕ್ಷಎಂ ನಾರಾಯಣ್
ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ರಂಗನಾಥ್, ಎಚ್ಆರ್ ಗೋಪಾಲಕೃಷ್ಣ, ಡಿ ನಾಗರಾಜ್ , ಡಾ. ಎಸ್. ಕೃಷ್ಣಪ್ಪ, ಜಿ ರಮೇಶ್, ಬಿಎಸ್ ಗುರುಮೂರ್ತಿ, ಗೋವಿಂದರಾಜ್. ಡಾ‌, ಟಿ ರಮೇಶ್, ಎಚ್ಆರ್ ವೆಂಕಟೇಶ್. ನಾಗರಾಜಯ್ಯ ಹಾಜರಿದ್ದರು.