ಕೆ.ಸಿ. ರೆಡ್ಡಿ ಅವರ  ಕಂಚಿನ ಪ್ರತಿಮೆ ಸ್ಥಾಪನೆಗೆ ಡಿಸಿಎಂ ಗೋವಿಂದ ಕಾರಜೋಳ ಸೂಚನೆ..

ಬೆಂಗಳೂರು. ಜೂ. 22,2020(www.justkannada.in):  ದಿ. ಕೆ.ಸಿ. ರೆಡ್ಡಿ ಅವರ ಮಾದರಿ ಪ್ರತಿಮೆ ಬದಲಾಯಿಸಿ ಶಾಶ್ವತವಾಗಿ ಉಳಿಯುವಂತಹ  ಮೂಲ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗುವುದು  ಎಂದು ಉಪಮುಖ್ಯಮಂತ್ರಿಯವರಾದ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು.

ವಿಧಾನಸೌಧದಲ್ಲಿಂದು ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಪ್ರತಿಮೆಯ ಮಾದರಿಗಳ  ತರಿಸಿಕೊಂಡು ಸೂಕ್ಷ್ಮವಾಗಿ ಅಧ್ಯಯನ ಮಾಡಿ,  ನೈಜ ಪ್ರತಿಮೆಯನ್ನು ಸ್ಥಾಪಿಸಬೇಕು.  ನುರಿತ ಹಾಗೂ ಪರಿಣಿತರ ಸಹಕಾರದೊಂದಿಗೆ ಈ ಪ್ರತಿಮೆಯನ್ನು ಸ್ಥಾಪಿಸಬೇಕು. ಶ್ರೀ ಕೆ.ಸಿ. ರೆಡ್ಡಿ ಯವರ ಕೊಡುಗೆ ಅಪಾರವಾಗಿದೆ. ಅವರ ಪ್ರತಿಮೆಯು ಶಾಶ್ವತವಾಗಿರುವಂತೆ ಸ್ಥಾಪಿಸಲು ಕ್ರಮಕೈಗೊಳ್ಳಬೇಕು. ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡು ಅನುಸರಣಾ ವರದಿಯೊಂದಿಗೆ ಮುಂದಿನ ಸಭೆಯಲ್ಲಿ ಮಂಡಿಸಬೇಕು ಎಂದು ಡಿಸಿಎಂ ಲೋಕೋಪಯೋಗಿ ಇಲಾಖೆಯ ಹಿರಿಯ   ಅಧಿಕಾರಿಗಳಿಗೆ ಸೂಚಿಸಿದರು.K.C.Reddy-statue DCM -Govinda Karajola –instructs

ಸಭೆಯಲ್ಲಿ ಶಾಸಕರಾದ ರಾಮಲಿಂಗರೆಡ್ಡಿ,  ದಿ. ಕೆ.ಸಿ. ರೆಡ್ಡಿ ಅವರ ಅವರ ಮೊಮ್ಮಗಳಾದ  ವಸಂತ ಕವಿತಾರೆಡ್ಡಿ, ವಿಧಾನಸಭೆಯ ಕಾಯದರ್ಶಿ ವಿಶಾಲಾಕ್ಷಿ, ವಿಧಾನಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ, ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್,  ಕಾರ್ಯದರ್ಶಿ ಬಿ. ಗುರುಪ್ರಸಾದ್, ಡಿಸಿಎಂ ಅವರ ಆಪ್ತ ಕಾರ್ಯದರ್ಶಿ ವಿ. ಶ್ರೀನಿವಾಸ್, ವಿವಿಧ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Key words: K.C.Reddy-statue DCM -Govinda Karajola –instructs