ಕಿಚ್ಚ-ಅನೂಪ್ ಭಂಡಾರಿ ಸಿನಿಮಾಗಾಗಿ ರೆಡಿ ಆಗ್ತಿದೆ ‘ಜಂಗಲ್ ಫಾರೆಸ್ಟ್’!

ಬೆಂಗಳೂರು, ಜುಲೈ 02, 2020 (www.justkannada.in): ಕಿಚ್ಚ ಸುದೀಪ್ ಸಿನಿಮಾಗಾಗಿ ಸುಮಾರು 50 ಲಕ್ಷ ರೂ.ಗಳಲ್ಲಿ ಹೈದರಾಬಾದ್ ನ ಸ್ಟುಡಿಯೋದಲ್ಲಿ ಕಾಡಿನ ಸೆಟ್ ನಿರ್ಮಾಣ ಮಾಡಲಾಗುತ್ತಿದೆ.

ಲಾಕ್ ಡೌನ್ ಬಳಿಕ ಚಿತ್ರೀಕರಣಕ್ಕೆ ಅಣಿಯಾಗುತ್ತಿರುವ ಚಿತ್ರತಂಡ, ಚಿತ್ರೀಕರಣಕ್ಕಾಗಿ ಕೃತಕವಾಗಿ ಕಾಡಿನ ಸೆಟ್ ನಿರ್ಮಾಣ ಮಾಡಲಿದೆ.

ಅನೂಪ್ ಭಂಡಾರಿ ನಿರ್ದೇಶನದ ‘ಫ್ಯಾಂಟಮ್’ ಸಿನಿಮಾಗೆ ಭರ್ಜರಿ ತಯಾರಿ ನಡೆದಿದೆ. ಅಂದ ಹಾಗೆ ಈ ಸಿನಿಮಾಗೆ ಅಜನೀಶ್ ಬಿ ಸಂಗೀತ ಸಂಯೋಜಿಸುತ್ತಿದ್ದಾರೆ.