“ಜೂನ್ ಮತ್ತು ಡಿಸೆಂಬರ್ ಮಾಹೆಯಲ್ಲಿ ಪಿಎಚ್.ಡಿ ಕೋರ್ಸ್ ವರ್ಕ್ ‌ಗಳಿಗೆ ಎರಡು ಬಾರಿ ಪರೀಕ್ಷೆ” : ಮೈಸೂರು ವಿವಿ ಸಿಂಡಿಕೇಟ್ ಸಭೆ ಅನುಮೋದನೆ 

ಮೈಸೂರು,ಫೆಬ್ರವರಿ,24,2021(www.justkannada.in) : ಪಿಎಚ್.ಡಿ ತಾತ್ಕಾಲಿಕ ನೋಂದಣಿ ಪಡೆದ ಅಭ್ಯರ್ಥಿಗಳು ಶೀಘ್ರವಾಗಿ ವ್ಯಾಸಂಗ ಮುಂದುವರಿಸುವ ಉದ್ದೇಶದಿಂದ ಪಿಎಚ್.ಡಿ ಕೋರ್ಸ್ ವರ್ಕ್‌ಗಳಿಗೆ ವರ್ಷದಲ್ಲಿ ಎರಡು ಬಾರಿ ತರಗತಿ ಹಾಗೂ ಪರೀಕ್ಷೆಗಳನ್ನು ನಡೆಸಲು ಮೈಸೂರು ವಿಶ್ವ ವಿದ್ಯಾನಿಲಯ ಸಿಂಡಿಕೇಟ್ ಸಭೆ ಅನುಮೋದನೆ ನೀಡಿದೆ.

jk

ಚಾಮರಾಜನಗರದಲ್ಲಿ ನಡೆದ ವಿವಿ ಸಿಂಡಿಕೇಟ್ ಸಭೆಯಲ್ಲಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜೇಗೌಡ ಅವರು ಪಿಎಚ್.ಡಿ ತಾತ್ಕಾಲಿಕ ನೋಂದಣಿ ಪಡೆದ ಅಭ್ಯರ್ಥಿಗಳು ಶೀಘ್ರವಾಗಿ ವ್ಯಾಸಂಗ ಮುಂದುವರಿಸಲು, ಜೆಆರ್‌ಎಫ್ ಅಥವಾ ಶಿಷ್ಯವೇತನ ಪಡೆಯುವವರ ಅನುಕೂಲಕ್ಕಾಗಿ ಪಿಎಚ್.ಡಿ ಕೋರ್ಸ್‌ಗೆ ತರಗತಿ ಹಾಗೂ ಪರೀಕ್ಷೆಗಳನ್ನು ಎರಡು ಬಾರಿ ನಡೆಸಬೇಕು ಎಂದು ಮನವಿ ಮಾಡಿದ ಹಿನ್ನೆಲೆ ಸಿಂಡಿಕೇಟ್ ಸಭೆಯು ಸ್ಪಂದಿಸಿ,ಈ ನಿರ್ಧಾರಕ್ಕೆ ಮುಂದಾಗಿದೆ.

ಪಿಎಚ್.ಡಿಗೆ ಶಿಷ್ಯವೇತನಕ್ಕೆ ಆಯ್ಕೆಯಾದವರಿಗೆ ನಡೆಯುತ್ತಿದ್ದ ಕೋರ್ಸ್ ಪರೀಕ್ಷೆ 2-3 ವರ್ಷಗಳಿಗೊಮ್ಮೆ ನಡೆಯುತ್ತಿತ್ತು. ಇದರಿಂದ ಕೋರ್ಸ್ ಪೂರ್ಣ ಗೊಳಿಸುವವರಿಗೆ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡು ಮೈಸೂರು ವಿವಿ ಇನ್ನು ಮುಂದೆ ಜೂನ್ ಮತ್ತು ಡಿಸೆಂಬರ್ ಮಾಹೆಯಲ್ಲಿ ಎರಡು ಬಾರಿ ಕೋರ್ಸ್ ವರ್ಕ್‌ಗೆ ಪರೀಕ್ಷೆ ನಡೆಸಲು ಅನುಮೋದನೆ ನೀಡಲಾಗಿದೆ.

ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಖಾಯಂ ಅಧ್ಯಾಪಕರ ನೇಮಕಕ್ಕೆ ಮನವಿ 

ಚಾಮರಾಜ ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಖಾಯಂ ಅಧ್ಯಾಪಕರನ್ನು ನೇಮಕ ಮಾಡುವಂತೆ ಡಾ.ಈ.ಸಿ.ನಿಂಗರಾಜೇಗೌಡ ಅವರು ಮಾಡಿದ ಮನವಿಗೆ ಸ್ಪಂದಿಸಿದೆ.

2009-10ನೇ ಸಾಲಿನಲ್ಲಿ ಆರಂಭವಾದ ಚಾಮರಾಜನಗರದ ಅಧ್ಯಯನ ಕೇಂದವು 54 ಎಕರೆಯಷ್ಟು ವಿಸ್ತೀರ್ಣ ಅಂಬೇಡ್ಕರ್ ಸ್ನಾತಕೋತ್ತರ 1 ಜೂನ್ ಮತ್ತು ಡಿಸೆಂಬರ್ ತಿಂಗಳಲ್ಲಿ ಕೋರ್ಸ್ ವರ್ಕ್‌ಗೆ ಪರೀಕ್ಷೆ 1 ಚಾ.ನಗರದ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಖಾಯಂ ಅಧ್ಯಾಪಕರ ನೇಮಕ” ಶೀಘ್ರವೇ 34 ಮಂದಿ ಅಧ್ಯಾಪಕರ ನೇಮಕಕ್ಕೆ ಸರ್ಕಾರಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಗಿದೆ.

ಕೇಂದ್ರದಲ್ಲಿರುವ 54 ಹುದ್ದೆಗಳ ಪೈಕಿ ಒಬ್ಬರೇ ಖಾಯಂ ನೇಮಕಾತಿ 

 June-December-Month-Ph.D.course-works-Twice Exam-Mysore VV-Syndicate-Meeting-Approved

10 ವಿಭಾಗಗಳನ್ನು ಒಳಗೊಂಡಿದ್ದು, 12-13 ಸ್ನಾತಕೋತ್ತರ ಕೋರ್ಸ್‌ಗಳು ನಡೆಯುತ್ತಿವೆ. ಆದರೆ, ಈವರೆಗೆ ಖಾಯಂ ನೇಮಕಾತಿ ಕಲ್ಪಿಸಿಲ್ಲ. ಕೇಂದ್ರದಲ್ಲಿರುವ 54 ಹುದ್ದೆಗಳ ಪೈಕಿ ಒಬ್ಬರೇ ಖಾಯಂ ನೇಮಕಾತಿ ಹೊಂದಿದ್ದು, ಉಳಿದ 53 ಮಂದಿಯ ಅತಿಥಿ ಉಪನ್ಯಾಸಕರೇ ಆಗಿದ್ದಾರೆ. ಆದ್ದರಿಂದ ಈ ಕೇಂದ್ರಕ್ಕೆ ಶೀಘ್ರವೇ ಖಾಯಂ ನೇಮಕಾತಿಯನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭೆಯು ಶೀಘ್ರವೇ 34 ಮಂದಿ ಅಧ್ಯಾಪಕರ ನೇಮಕಕ್ಕೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿತು.

ENGLISH SUMMARY….

Classes and exams twice in a year for Ph.D. courses
Mysuru, Feb. 24, 2021 (www.justkannada.in): The Syndicate meeting of the University of Mysore has approved the proposal to conduct classes and exams twice a year for Ph.D. courses to enable candidates who are pursuing Ph.D. to complete their courses soon.
The syndicate meeting was held in Chamarajanagara. Syndicate member Dr. E.C. Ningarajegowda requested to conduct classes and exams twice a year to help the Ph.D. candidates who have obtained temporary registration to continue their studies soon, and also for the advantage of those who want to get GRF or scholarships. The meeting agreed to this and arrived at this decision.
The course exams of the candidates who are selected for PhD scholarship was held once in 2-3 years causing them a lot of problems to complete the course. Considering the problem, the University Syndicate has approved to conduct the course exams twice a year that is in June and December.
Keywords: University of Mysore/ syndicate meeting/ PhD/ course exams twice a year

key words :  June-December-Month-Ph.D.course-works-Twice Exam-Mysore VV-Syndicate-Meeting-Approved