‘ನ್ಯಾಯಾಧೀಶರು ಸರ್ವಜ್ಞರಲ್ಲ’ ಎಂದ ಬಿಜೆಪಿ ರಾಷ್ಟ್ರೀಯ ಪ್ರಧಾನಿ ಕಾರ್ಯದರ್ಶಿ ಸಿ.ಟಿ ರವಿ…

ಬೆಂಗಳೂರು,ಮೇ,13,2021(www.justkannada.in):  ರಾಜ್ಯದಲ್ಲಿ ಕೊರೋನಾ ಲಸಿಕೆ ಕೊರತೆ ಮತ್ತು ನೀಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವನ್ನ ಹೈಕೋರ್ಟ್ ತರಾಟೆ ತೆಗೆದುಕೊಂಡ ಬೆನ್ನಲ್ಲೆ ಇದೀಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು,  ನ್ಯಾಯಾಧೀಶರು ಸರ್ವಜ್ಞರಲ್ಲ ಎಂದು ಹೇಳಿಕೆ ನೀಡಿದ್ದಾರೆ.jk

ಬೆಂಗಳೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ,  ತಜ್ಞರ ಕಮಿಟಿ ನೀಡುವ ವರದಿಯನ್ನು ಆಧರಿಸಿಯೇ ಕೆಲಸ ಮಾಡುತ್ತೇಂದು ಕೇಂಧ್ರ ಸರ್ಕಾರ ಹೇಳಿದೆ. ಇದನ್ನ ಸುಪ್ರೀಂಕೋರ್ಟ್ ಕೂಡ ಇದನ್ನ  ಒಪ್ಪಿದೆ ಎಂದರು.judges-not-omniscient-said-bjp-national-secretary-general-ct-ravi

ಕೊರೊನಾ ಲಸಿಕೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ ತೆಗೆದುಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ವೇಳೆ ನ್ಯಾಯಾಧೀಶರು ಸರ್ವಜ್ಞರಲ್ಲ ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ನಮ್ಮ ಸಿದ್ಧತೆ ಸಾಕಾಗಲ್ಲ ಎಂದು ಒಪ್ಪುವೆ. ಆದರೆ ಕೊರೋನಾ ವಿಚಾರದಲ್ಲಿ ರಾಜಕಾರಣ ಮಾಡಲಾಗುತ್ತಿದೆ. ಕೊರೋನಾ ಮುಂದಿಟ್ಟುಕೊಂಡು ವಿಕೃತಾನಂದ ಪಡುತ್ತಿದ್ದಾರೆ. ಸಾವಿಗೆ ಚೀನಾ ವೈರಸ್ ದೂರಬೇಕೇ ಹೊರತು ಪ್ರಧಾನಿ ಮೋದಿಯನ್ನಲ್ಲ ಎಂದು ಸಿ.ಟಿ ರವಿ ಹೇಳಿದರು.

Key words: judges –not- omniscient-said -BJP national secretary general-CT  Ravi.