‘ಬಂಡೀಪುರಕ್ಕೆ ಉತ್ತಮ ಅಧಿಕಾರಿ ನಿಯೋಜಿಸುವಂತೆ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಜೋಸೆಫ್ ಹೂವರ್ ಮನವಿ

kannada t-shirts

ಚಾಮರಾಜನಗರ,ಫೆಬ್ರವರಿ3,2022(www.justkannada.in) ಬಂಡೀಪುರ ಸಂರಕ್ಷಣಾ ಅರಣ್ಯ ಪ್ರದೇಶಕ್ಕೆ ಉತ್ತಮ ನಿರ್ವಹಣಾ ಸಾಮರ್ಥ್ಯ ಇರುವ ಅರಣ್ಯ ಸಂರಕ್ಷಣಾಧಿಕಾರಿ ನಿಯೋಜಿಸುವಂತೆ ವನ್ಯಜೀವಿ ಮಂಡಳಿ ಮಾಜಿ ಸದಸ್ಯರಾದ ಜೋಸೆಫ್ ಹೂವರ್ ಅವರು ಮನವಿ ಸಲ್ಲಿಸಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು 150 ಕ್ಕೂ ಹೆಚ್ಚು ಅಳಿವಿನಂಚಿನಲ್ಲಿರುವ ಹುಲಿಗಳಿಗೆ ನೆಲೆಯಾಗಿದ್ದು, ಬಂಡೀಪುರ ಅರಣ್ಯ ಪ್ರದೇಶದಲ್ಲಿ 2013 ರಿಂದ ಇಲ್ಲಿಯವರೆಗೆ ಮೂರು ಪ್ರಮುಖ ಬೆಂಕಿ ಅವಘಡಗಳು ಅನುಭವಿಸಿವೆ. 2019 ರಲ್ಲಿ ಅತ್ಯಂತ ದೊಡ್ಡ ಅವಘಡ ಸಂಭವಿಸಿದ್ದು ಸುಮಾರು 400 ಹೆಕ್ಟೇರ್‌ಗಿಂತಲೂ ಹೆಚ್ಚು ಹುಲಿ ಆವಾಸಸ್ಥಾನ ಸುಟ್ಟಿ ಹೋಗಿದ್ದು ವಸರ್ಕಾರಿ ತನಿಖೆಗಳು ಈ ವಿನಾಶಕಾರಿ ಬೆಂಕಿ ಅವಘಡಕ್ಕೆ ಅಸಮರ್ಥ ನಿಷ್ಠರ ಆಡಳಿತವೇ ಪ್ರಮುಖ ಕಾರಣವೆಂದು ಹೇಳಿದೆ.

ಹಿಂದಿನ ಕ್ಷೇತ್ರ ನಿರ್ದೇಶಕರಾದ ಎನ್.ಆರ್. ನಟೇಶ್ ಅವರು ತಮ್ಮ ಅಧಿಕಾರಾವಧಿಯನ್ನು ಕೊನೆಗೊಳಿಸಿದ್ದು ಆಗಸ್ಟ್ 2021ರಿಂದ ಯಾವುದೇ ಅಧಿಕಾರಿ ನೇಮಕಗೊಂಡಿಲ್ಲ. ಕಳೆದ ಕೆಲವು ವರ್ಷಗಳಿಂದ 6500 ಹೆಕ್ಟೇರ್‌ಗಿಂತಲೂ ಹೆಚ್ಚು ಪ್ರದೇಶವನ್ನು ಕಳೆದುಕೊಂಡಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅವಘಡ ಸಂಭವಿಸಲು ಅನುವು ಮಾಡಿಕೊಡುವುದು ಸೂಕ್ತವಲ್ಲ ಅರಣ್ಯ ಪರಿಸರ ಜೀವವೈವಿಧ್ಯವು ಆದ್ಯತೆಗಳಲ್ಲಿ ಕನಿಷ್ಠವಾಗಿದೆ ಎಂಬುದು ನಿರಾಶದಾಯಕವಾಗಿದೆ. ನಮ್ಮ ಭವಿಷ್ಯವು ನಮ್ಮ ಕಾಡುಗಳ ಆರೋಗ್ಯದ ಮೇಲೆ ಅವಲಂಬಿತವಾಗಿದೆ  ಎಂಬುದನ್ನು ಅರಿತುಕೊಂಡು ಕ್ರಮಕೈಗೊಳ್ಳಬೇಕು ಜೋಸಫ್ ಹೂವರ್ ಹೇಳಿದ್ದಾರೆ.

key words: Joseph Hoover-Wildlife -Board- Bandipur

 

website developers in mysore