ಮತ್ತೆ ನಟನೆಯತ್ತ ಜೋಗಿ ಪ್ರೇಮ್…

ಬೆಂಗಳೂರು,ಜುಲೈ,17: ಸ್ಯಾಂಡಲ್ ವುಡ್  ನ ಖ್ಯಾತ ನಿರ್ದೇಶಕ ಹಾಗೂ ಹಲವು ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದ್ದ ಜೋಗಿ ಪ್ರೇಮ್ ಈಗ ಮತ್ತೆ ನಟನೆಯತ್ತ ಮುಖ ಮಾಡಿದ್ದಾರಂತೆ.

ಹೌದು, ‘ಫ್ಯಾನ್ ಆಫ್ ರೆಬೆಲ್ ಸ್ಟಾರ್’ ಎಂಬ ಚಿತ್ರಕ್ಕೆ ನಾಯಕನಟರಾಗಿ ಪ್ರೇಮ್ ಕಾಣಿಸಿಕೊಳ್ಳುತ್ತಿದ್ದಾರಂತೆ. ಸದ್ಯ ಈ ಚಿತ್ರದ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಈ ಚಿತ್ರವನ್ನು ‘ಪತಿಬೇಕು ಡಾಟ್ ಕಾಮ್’ ಚಿತ್ರದ ರಾಕೇಶ್ ಆಯಕ್ಷನ್ ಕಟ್ ಹೇಳಲಿದ್ದಾರೆ.

ಈ ಮಧ್ಯೆ ಪ್ರೇಮ್ ಪ್ರಾರಂಭದಲ್ಲಿ ಮೂರು ಸಿನಿಮಾಗಳನ್ನು ನಿರ್ದೇಶಿಸುವುದರೊಂದಿಗೆ ‘ಪ್ರೀತಿ ಏಕೆ ಭೂಮಿ ಮೇಲಿದೆ’ ಮೂಲಕ ನಾಯಕನಟರಾಗಿಯೂ ಬಣ್ಣ ಹಚ್ಚಿದರು. ನಂತರ ‘ಡಿಕೆ’, ‘ದಾಸವಾಳ’, ‘ಅಡ್ಡ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಸದ್ಯ ‘ಏಕ್ ಲವ್ ಯಾ’ ಚಿತ್ರಕ್ಕೆ ಆಯಕ್ಷನ್ ಹೇಳುತ್ತಿದ್ದು, ಈ ನಡುವೆ ಮತ್ತೆ ಹೀರೋ ಆಗಿ ಕಾಣಿಸಿಕೊಳ್ಳಲು ತಯಾರಿ ನಡೆಸಿದ್ದಾರೆ.