JK EXCLUSIVE  :  ಯುವರಾಜ ಕಾಲೇಜು ;  ನಾಲ್ಕು ವರ್ಷಗಳ  BSc.Ed ಕೋರ್ಸ್ ಆರಂಭಕ್ಕೆ NCTE ಗ್ರೀನ್ ಸಿಗ್ನಲ್.

 

ಮೈಸೂರು, ಜ.29, 2021 : (www.justkannada.in news) : ಪ್ರಸ್ತಕ್ತ ಶೈಕ್ಷಣಿಕ ಸಾಲಿನಿಂದ ಮೈಸೂರು ಯುವರಾಜ ಕಾಲೇಜಿನಲ್ಲಿ ನಾಲ್ಕು ವರ್ಷಗಳ ಬಿಎಸ್ಸಿ ಎಡ್ ( BSc Ed) ಕೋರ್ಸ್ ಆರಂಭಕ್ಕೆ ಅನುಮತಿ ನೀಡಲಾಗಿದೆ.

ಮೈಸೂರು ವಿವಿ ಕಾರ್ಯಸೌಧ ಕ್ರಾಫರ್ಡ್ ಭವನದಲ್ಲಿ ಇಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಈ ವಿಷಯವನ್ನು ಪ್ರಕಟಿಸಿದರು.

jk

ಈ ಸಂಬಂಧ ಯುವರಾಜ ಕಾಲೇಜಿಗೆ ಬಿಎಸ್ಸಿ ಇಡಿ ಮಾನ್ಯತೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಮಾನ್ಯತೆ ನೀಡಿರುವ   ಎನ್.ಸಿ.ಟಿ.ಇ , ನಾಲ್ಕು ವರ್ಷಗಳ ಕೋರ್ಸ್ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. 50 ಮಂದಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು NCTE ಸಮ್ಮತಿಸಿದೆ .

ಇದು ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಜಾರಿಗೆ ಬರಲಿದೆ. ಅಂದರೆ, ಜೂನ್ –ಜುಲೈ ಪ್ರವೇಶಾತಿಯಿಂದಲೇ  ಯುವರಾಜ ಕಾಲೇಜಿನಲ್ಲಿ  ಬಿಎಸ್ಸಿ ಇಡಿ ಕೋರ್ಸ್ ಆರಂಭವಾಗಲಿದೆ  ಎಂದು ಕುಲಪತಿಗಳು ಸಿಂಡಿಕೇಟ್ ಸಭೆಗೆ ಮಾಹಿತಿ ನೀಡಿದರು.

mysore-university-yuvaraja-college-convocation-101-vc-hemanth.kumar

 

101ನೇ ಘಟಿಕೋತ್ಸವ :

ಪ್ರತಿಷ್ಠಿತ ಮೈಸೂರು ವಿವಿಯ 101 ನೇ ಘಟಿಕೋತ್ಸವ  ಸಮಾರಂಭ ಈ ವರ್ಷದ ಮಾರ್ಚ್, ಏಪ್ರಿಲ್  ತಿಂಗಳಿನಲ್ಲಿ ಆಯೋಜಿಸಲು ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

 

Key words : mysore-university-yuvaraja-college-convocation-101-vc-hemanth.kumar