JK EXCLUSIVE : ಮೈಸೂರು ವಿವಿ 100 ನೇ ಘಟಿಕೋತ್ಸವ: ಪಿಎಚ್ಡಿ ಪಡೆಯಲಿರುವ ರಾಜ್ಯದ ಐಎಎಸ್ ಹಾಗೂ ಐಎಫ್ಎಸ್ ಅಧಿಕಾರಿಗಳು.

 

ಮೈಸೂರು, ಅ.13, 2020 : (www.justkannada.in news) : ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ 100 ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯದ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಿಬ್ಬರು ಪಿಎಚ್ಡಿ ಪದವಿ ಪಡೆಯುತ್ತಿರುವುದು ವಿಶೇಷ.

ರಾಜ್ಯದ ಹಿರಿಯ ಐಎಎಸ್ ಅಧಿಕಾರಿ, ಕರ್ನಾಟಕ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹಾಗೂ ಐಎಫ್ಎಸ್ ಅಧಿಕಾರಿ , ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಆಯುಕ್ತ ಮನೋಜ್ ರಾಜನ್ ಪಿಎಚ್ಡಿ ಪದವಿ ಪಡೆಯಲಿರುವ ಅಧಿಕಾರಿಗಳು.

jk-logo-justkannada-logo

ಐಎಎಸ್ ಅಧಿಕಾರಿ ಸಂಜೀವ್ ಕುಮಾರ್ ಅವರು ನರೇಗಾ- ಕಾನೂನು ಹಕ್ಕು, ವಿಧಾನ ಮತ್ತು ಸುಸ್ಥಿರ ಬದುಕು- ಕರ್ನಾಕಟದಲ್ಲಿ ಒಂದು ತುಲನಾತ್ಮಕ ಅಧ್ಯಯನ ‘ ( ‘ MGNREGA-Law Rights, Process and Sustainable Livelihood- A Critical Study in Karnataka ‘ ) ವಿಷಯಕ್ಕೆ ಸಂಬಂಧಿಸಿದಂತೆ ಮಂಡಿಸಿರುವ ಮಹಾಪ್ರಬಂಧವನ್ನು ಮೈಸೂರು ವಿವಿ ಪಿಎಚ್ಡಿ ಪದವಿಗೆ ಅಂಗೀಕರಿಸಿದೆ.  ಮೈಸೂರು ವಿವಿ ಐಡಿಎಸ್ (Institue of Development Studies) ಪ್ರಧ್ಯಾಪಕರಾದ ಪ್ರೊ. ಶ್ರೀಜಯ ದೇವರಾಜ್ ಅರಸ್ ಮತ್ತು ಪ್ರೊ.ಎಸ್. ಮಾದೇಶ್ವರನ್ ಈ ಸಂಶೋಧನಾ ಪ್ರಬಂಧಕ್ಕೆ ಮಾರ್ಗದರ್ಶಕರು.

ಐಎಫ್ಎಸ್ ಅಧಿಕಾರಿ ಮನೋಜ್ ರಾಜನ್ ಅವರು, ‘ ದೇಶದಲ್ಲಿ ಕೃಷಿ ಮಾರುಕಟ್ಟೆ ಸುಧಾರಣೆ ಮತ್ತು ತಂತ್ರಜ್ಞಾನದ ಪಾತ್ರ ‘ ( Agricultural Market Reforms in the Country and the Role of Technology ‘ ) ವಿಷಯ ಬಗ್ಗೆ ಮಂಡಿಸಿದ ಮಹಾಪ್ರಬಂಧವನ್ನು ಮೈಸೂರು ವಿವಿ ಅಗ್ರಿ ಬಿಸ್ನೆಸ್ ವಿಭಾಗದಲ್ಲಿ ಡಿ.ಲಿಟ್ ಪದವಿಗೆ ಅಂಗೀಕರಿಸಿದೆ.

Karnataka-state-IAS-sanjivkumar- IFS-manoj.rajan-awarded-PhD-degree-from-Mysore-university-on-its-100th-convocation

OOOO

key words : Karnataka-state-IAS-sanjivkumar- IFS-manoj.rajan-awarded-PhD-degree-from-Mysore-university-on-its-100th-convocation

ENGLISH SUMMARY :

Mysore university 100th convocation: IAS and IFS officials receiving PhD.

Karnataka-state-IAS-sanjivkumar- IFS-manoj.rajan-awarded-PhD-degree-from-Mysore-university-on-its-100th-convocation

MYSORE : Senior IAS officer of the state, Chief Electoral Officer of Karnataka Sanjeev Kumar and IFS officer, Karnataka State Disaster Management Commissioner Manoj Rajan will be graduating Ph.D from university of mysore.
MGNREGA-Law Rights, Process and Sustainable Livelihood- A Critical Study in Karnataka by Sanjeev Kumar and Agricultural Market Reforms in the Country and the Role of Technology by Manoj Rajan .