ಜಿಂದಾಲ್ ಗೆ ಭೂಮಿ ಪರಭಾರೆ ವಿಚಾರ: ಸಚಿವ ಆನಂದ್ ಸಿಂಗ್ ತೀವ್ರ ವಿರೋಧ…

ಬೆಂಗಳೂರು,ಏಪ್ರಿಲ್,30,2021(www.justkannada.in):  ಹಿಂದಿನ ಸಮ್ಮಿಶ್ರ ಸರ್ಕಾರದ ವೇಳೆ ಜಿಂದಾಲ್ ಗೆ ಭೂಮಿ ಪರಭಾರೆಗೆ ವಿರೋಧ ವ್ಯಕ್ತಪಡಿಸಿ ಇದೀಗ  ಜಿಂದಾಲ್ ಗೆ ಭೂಮಿ ಮಾರಾಟಕ್ಕೆ ಮುಂದಾಗಿರುವ ಸರ್ಕಾರದ ನಡೆ ವಿರುದ್ಧ ಸ್ವತಃ ಸಚಿವರೇ ತೀವ್ರ ವಿರೋಧ ವ್ಯಕ್ತಪಡಿಸಿದದ್ದಾರೆ.jk

ಹೌದು, ಜಿಂದಾಲ್ ಗೆ ಭೂಮಿ ಪರಭಾರೆ ಮಾಡುವುದಕ್ಕೆ ಸಚಿವ ಆನಂದ್ ಸಿಂಗ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಸಚಿವ ಆನಂದ್ ಸಿಂಗ್, ಜಿಂದಾಲ್ ಗೆ ಭೂಮಿ ಪರಭಾರೆ ಮಾಡುವುದು ಬೇಡ. ಲೀಜ್ ರೂಪದಲ್ಲಿ ನೀಡಲಿ. ಸುಮಾರು 3 ಸಾವಿರ ಕೋಟಿ ಬೆಲೆ ಬಾಳುವ ಭೂಮಿ. ಅದನ್ನ ಪರಭಾರೆ ಮಾಡುವುದು ಸರಿಯಲ್ಲ ಎಂದು ಹೇಳಿದರು.jindal-land-sale-minister-anand-singh-oppose

ಈ ಹಿಂದೆ ಇದನ್ನ ನಾನು ವಿರೋಧಿಸಿದ್ದೆ. ಆಗ ವಿಪಕ್ಷದಲ್ಲಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಸಹ ವಿರೋಧಿಸಿದ್ದರು. ಈಗ  ಅವರು ಪರಭಾರೆ ಮಾಡಿದ್ದು ಸರಿಯಲ್ಲ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇದನ್ನ ವಿರೋಧಿಸುವೆ.  ಸರ್ಕಾರದ ನಿರ್ಧಾರದ ಬಳಿಕ ಮತ್ತೆ ನನ್ನ ನಿರ್ಧಾರವನ್ನ ತಿಳಿಸುವೆ ಎಂದು ಸಚಿವ ಆನಂದ್ ಸಿಂಗ್ ಹೇಳಿದರು.

Key words: Jindal – land-sale-  Minister -Anand Singh- oppose