ಸಲಾಂ ಆರತಿ ಬಗ್ಗೆ ಮಾತನಾಡಿದ ಸಚಿವ ಆರ್.ಅಶೋಕ್ ಗೆ ಸಿಎಂ ಇಬ್ರಾಹಿಂ ತಿರುಗೇಟು.

ಬೆಂಗಳೂರು,ಅಕ್ಟೋಬರ್,8,2022(www.justkannada.in):  ಸ್ಥಳೀಯರು ಮನವಿ ಮಾಡಿದರೇ ಶೃಂಗೇರಿ ದೇವಸ್ಥಾನದ ಟಿಪ್ಪು ಹೆಸರಿನ ಸಲಾಂ ಆರತಿಯನ್ನೂ ನಿಲ್ಲಿಸುತ್ತೇವೆ ಎಂದು ಹೇಳಿಕೆ ನೀಡಿದ ಸಚಿವ ಆರ್.ಅಶೋಕ್ ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ತಿರುಗೇಟು ನೀಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಇಬ್ರಾಹಿಂ, ಶೃಂಗೇರಿ ಮಠದವರು ಸಲಾಂ ಆರತಿ ಪದ್ದತಿ ತೆಗೆಯಲ್ಲ.  ಟಿಪ್ಪು ಕೊಟ್ಟ ವಜ್ರಕ್ಕೆ ಮೊದಲ ಪೂಜೆಯಾಗುತ್ತದೆ.  ಅ ವಜ್ರ ಕಿತ್ತುಕೊಳ್ಳಲು ಬಿಜೆಪಿಗೆ ಧಮ್ ಇದೆಯಾ…? ಎಂದು ಟಾಂಗ್ ನೀಡಿದರು.

ವೋಟ್ ಗಾಗಿ ಇದೆಲ್ಲಾ ಮಾಡುತ್ತೀರಾ. ಕಾಂಗ್ರೆಸ್ ನಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಜನ ನಿಮ್ಮನ್ನ ಓಡಿಸುವ ಕಾಲ ಹತ್ತಿರ ಬಂದಿದೆ ಎಂದು ಸಿಎಂ ಇಬ್ರಾಹಿಂ ವಾಗ್ದಾಳಿ ನಡೆಸಿದರು.

ಟಿಪ್ಪು ಎಕ್ಸ್ ಪ್ರೆಸ್ ರೈಲು ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಇಬ್ರಾಹಿಂ,  ಮಹಾರಾಜರ ಹೆಸರಿನ ಹೊಸ ರೈಲನ್ನೆ ಬಿಡಬಹುದಿತ್ತು. ಟಿಪ್ಪು ಮರ್ಯಾದೆ ಟಿಪ್ಪುವಿಗಿದೆ. ಮಹಾರಾಜರ ಮರ್ಯಾದೆ ಮಹಾರಾಜರಿಗಿದೆ. ಹೊಸ ಟ್ರೈನ್ ಬಿಟ್ಟು ಮಹರಾಜರ ಹೆಸರಿಡಬಹುದಿತ್ತು.  ಹೊಸ ಟ್ರೈನ್ ಬಿಡೋಕೆ ಜಿಪುಣನಾ..?  ಹೆಸರು ಬದಲಾವಣೆಯಿ ಮರ್ಯಾದೆ ಕಡಿಮೆಯಾಗಲ್ಲ ಎಂದು ಬಿಜೆಪಿಗೆ ಕುಟುಕಿದರು.

Key words: jds-president- CM Ibrahim – Minister- R. Ashok – Salam Aarti