ಬಿಜೆಪಿ ಎಂಬ ರೈಲು ಮಿಸ್ ಮಾಡಿಕೊಂಡರೇ ಜೆಡಿಎಸ್ ಗೆ ನಷ್ಟ- ಸಚಿವ ಡಾ.ಕೆ. ಸುಧಾಕರ್  ..

Promotion

ಬೆಂಗಳೂರು,ಡಿಸೆಂಬರ್,31,2020(www.justkannada.in): ಕಾಂಗ್ರೆಸ್ ಸಹವಾಸದಿಂದ ಜೆಡಿಎಸ್ ಬೇಸತ್ತು ಹೋಗಿದೆ. ಹೀಗಾಗಿ ಇನ್ಮುಂದೆ ಕಾಂಗ್ರೆಸ್ ಜತೆ ಜೆಡಿಎಸ್ ಹೋಗಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.jk-logo-justkannada-mysore

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಕಾಂಗ್ರೆಸ್ ಸಹವಾಸ ಮಾಡಿ ಜೆಡಿಎಸ್ ಅವನತಿಯತ್ತ ಸಾಗಿದೆ. ಇನ್ಮುಂದೆ ಜೆಡಿಎಸ್  ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂದರು.jds-misses-bjp-train-loss-minister-sudhakar

ಬಿಜೆಪಿ  ಪಕ್ಷ ಎಂಬ ರೈಲಿನ ಜತೆ ಜೆಡಿಎಸ್ ಗುರುತಿಸಿಕೊಂಡರೇ ಒಳ್ಳೆಯದು. ದೆಹಲಿ ಸೇರಬಹುದು. ಇಲ್ಲವಾದರೇ ಹಳ್ಳಿಯಲ್ಲೇ ಉಳಿಯಬೇಕಾದಿತು. ಬಿಜೆಪಿ ರೈಲು ಮಿಸ್ ಮಾಡಿಕೊಂಡರೇ ಜೆಡಿಎಸ್ ಗೆ ನಷ್ಟವಾಗಲಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.

Key words: JDS -misses -BJP -train – Loss-minister sudhakar