800 ಕೋಟಿ ಗಳಿಸಿದ ಮೊದಲ ಹಿಂದಿ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾದ ಜವಾನ್ !

Promotion

ಬೆಂಗಳೂರು, ಸೆಪ್ಟೆಂಬರ್ 19, 2023 (www.justkannada.in): ಬಿಡುಗಡೆಯಾದ ಒಂಬತ್ತು ದಿನಗಳಲ್ಲಿ 700 ಕೋಟಿ ಗಳಿಸಿದ್ದ ಜವಾನ್ ಇತ್ತೀಚೆಗೆ 800 ಕೋಟಿ ರೂ. ಬಾಚಿಕೊಳ್ಳುವ ಮೂಲಕ ದಾಖಲೆ ಬರೆದಿದೆ.

ವಿಶ್ವದಾದ್ಯಂತ 11 ದಿನಗಳಲ್ಲಿ ಈ ಚಿತ್ರ 477 ಕೋಟಿ ನಿವ್ವಳ ಮತ್ತು ಒಟ್ಟು 840 ಕೋಟಿಗಳನ್ನು ಸಂಗ್ರಹಿಸಿದೆ. ಇದರೊಂದಿಗೆ ಜವಾನ್ 800 ಕೋಟಿ ಗಳಿಸಿದ ಮೊದಲ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಕಳೆದ ವಾರಾಂತ್ಯ ಚಿತ್ರವು 36.52 ಕೋಟಿ ರೂ. ನಿವ್ವಳ ಮತ್ತು 70 ಕೋಟಿ ರೂ. ಗಳಿಸಿತ್ತು. ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಪ್ರದರ್ಶನವಾಗುತ್ತಿರುವ ಜವಾನ್ 11 ದಿನಗಳಲ್ಲಿ 34 ಮಿಲಿಯನ್ ಡಾಲರ್ (ಭಾರತೀಯ ಕರೆನ್ಸಿಯಲ್ಲಿ ರೂ. 282 ಕೋಟಿ) ಸಂಗ್ರಹಿಸಿದೆ.

ಅಂದಹಾಗೆ ಪಠಾಣ್ ಚಿತ್ರ 10 ದಿನದಲ್ಲಿ ರೂ.729 ಕೋಟಿ ಕಲೆಕ್ಷನ್ ಮಾಡಿದ್ದರೆ, ಜವಾನ್ ರೂ.797 ಕೋಟಿ ಕಲೆಕ್ಷನ್ ಮಾಡಿದೆ.

ಶಾರುಖ್ ಜೊತೆ ಲೇಡಿ ಸೂಪರ್ ಸ್ಟಾರ್ ನಯನತಾರಾ ನಟಿಸಿದ್ದರು. ವಿಲನ್ ಆಗಿ ನಟ ವಿಜಯ್ ಸೇತುಪತಿ ನಟಿಸಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಸಂಜಯ್ ದತ್ ಅತಿಥಿ ಪಾತ್ರದಲ್ಲಿದ್ದಾರೆ. ನಟಿ ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ, ಸುನಿಲ್ ಗ್ರೋವರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.