“ಜನವರಿ ೨೦ ರಂದು ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ರಾಜಭವನ ಮುತ್ತಿಗೆ” : ಕಾಂಗ್ರೆಸ್ ಮುಖಂಡ ರಮಾನಾಥ ರೈ

ಬೆಂಗಳೂರು,ಜನವರಿ,16,2021(www.justkannada.in) :  ಕೇಂದ್ರ ಸರ್ಕಾರದ ಧೋರಣೆಗಳು ಸರಿಯಿಲ್ಲ. ಪೆಟ್ರೋಲ್ ಡೀಸಲ್ ಬೆಲೆ ಏರಿಕೆ ಆಗ್ತಾನೇ ಇದೆ. ಇತ್ತ ರೈತರು ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದೇ ಜನವರಿ ೨೦ ರಂದು ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ರಾಜಭವನ ಮುತ್ತಿಗೆ. ಹಾಕಲು ನಿರ್ಧಾರಿಸಲಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ರಮಾನಾಥ ರೈ ಹೇಳಿದ್ದಾರೆ.jk-logo-justkannada-mysoreಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬೆಳಗ್ಗೆ ೧೧ ಕ್ಕೆ ರಾಜಭವನ ಮುತ್ತಿಗೆ ಹಾಕುತ್ತೇವೆ. ಮುತ್ತಿಗೆ ಹಾಕುವುದರ ಜೊತೆಗೆ ಕೃಷಿ ಕಾನೂನುಗಳನ್ನು ವಿರೋಧಿಸಿ ಫ್ರೀಡಂ ಪಾರ್ಕ್ ನಿಂದ ಮೆರವಣಿಗೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ರೈತರು ಸತತ ೫೦ ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ೯ ಸುತ್ತಿನ ಸಭೆ ನಡೆದರೂ ಫಲ ನೀಡದೇ  ಪ್ರತಿಭಟನೆಯಲ್ಲಿ ಕೆಲ ರೈತರು ಅಸುನೀಗಿದ್ದಾರೆ. ಕಾಂಗ್ರೆಸ್ ಪಕ್ಷ ಸದಾ ರೈತರ ಪರವಾಗಿ ಇರುತ್ತದೆ. ರೈತರ ಪರವಾಗಿ ಒಂದು ಅಭಿಯಾನ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.January ೨೦-Central-government-Condemn-attitude-rajabhavana-Siege-Congress-leader-Ramanatha Rai

ಮೆರವಣಿಗೆಯಲ್ಲಿ ಎಲ್ಲಾ ಜಿಲ್ಲೆಯ ಕೆಪಿಸಿಸಿ,ಜಿಲ್ಲಾ ಕಾಂಗ್ರೆಸ್ ಸದಸ್ಯರು, ಹಾಲಿ, ಮಾಜಿ ಜನಪ್ರತಿನಿಧಿಗಳು ಸೇರಿದಂತೆ ಕಾಂಗ್ರೆಸ್ ನ ಎಲ್ಲಾ ಪದಾಧಿಕಾರಿಗಳು ಭಾಗಿಯಾಗಲ್ಲಿದ್ದಾರೆ. ಎಲ್ಲಾ ರಾಜ್ಯದಲ್ಲೂ ರಾಜಭವನಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

key words : January ೨೦-Central-government-Condemn-attitude-rajabhavana-Siege-Congress-leader-Ramanatha Rai