ಜನತಾ ಕರ್ಫ್ಯೂ ಕರೆ ಹಿನ್ನೆಲೆ: ಭಾನುವಾರ ಕೆಎಸ್ ಆರ್ ಟಿಸಿ ಬಸ್ ಸಂಚಾರ ಇರುತ್ತೋ…? ಇರಲ್ವೋ…?

ಬೆಂಗಳೂರು,ಮಾ,20,2020(www.justkannada.in):  ಕರೋನಾ ವೈರಸ್ ಹರಡುವ ಭೀತಿ ಹೆಚ್ಚಾದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 22(ಭಾನುವಾರ)ದಂದು ಜನತಾ ಕರ್ಫ್ಯೂಗೆ ಕರೆ ನೀಡಿ ಯಾರು ಮನೆಯಿಂದ ಹೊರಬಾರದೆ ಜನತಾ ಕರ್ಫ್ಯೂ ಬೆಂಬಲಿಸಿ ಎಂದು ಮನವಿ ಮಾಡಿದ್ದಾರೆ.

ಪ್ರಧಾನಿ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ರಾಜ್ಯದಲ್ಲಿ  ಓಲಾ, ಊಬರ್, ಹೋಟೆಲ್ ಮಾಲೀಕರ ಸಂಘ, ಮದ್ಯ ಮತ್ತು ವೈನ್ , ಬೀದಿಬದಿ ವ್ಯಾಪಾರಿಗಳ ಸಂಘಟನೆ ಸೇರಿ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದು  ಭಾನುವಾರ ಎಲ್ಲಾ ಬಂದ್ ಆಗಲಿವೆ. ಬೆಂಗಳೂರಿನಲ್ಲಿ ಮೆಟ್ರೋ ರೈಲು ಸಂಚಾರ ಸಹ ಸ್ಥಗಿತವಾಗಲಿದೆ.

ಈ ನಡುವೆ  ಮಾರ್ಚ್ 22 ರಂದು ಕೆಎಸ್ ಆರ್ ಟಿಸಿ  ಬಸ್ ಸಂಚಾರವೂ ಕೂಡ ಬಹುತೇಕ ಇರುವುದಿಲ್ಲ. ಈ ಬಗ್ಗೆ ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ಮಾರ್ಚ್ 22 ರಂದು ಕೆಎಸ್ ಆರ್ ಟಿಸಿ ಸೇವೆ ಇರುವುದಿಲ್ಲ. ಬಹುತೇಕ ಇರುವುದಿಲ್ಲ.  ಅಗತ್ಯ ಇದ್ದಲ್ಲಿ ಮಾತ್ರ ಒಂದೆರೆಡು ಬಸ್ ಗಳು ಸಂಚಾರ ನಡೆಸಲಿವೆ. ಜನತಾ ಕರ್ಫ್ಯೂ ಹಿನ್ನೆಲೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಂದು ಕನಿಷ್ಠ ಮಟ್ಟದಲ್ಲಿ ಬಸ್ ಗಳ ಕಾರ್ಯಾಚರಣೆ ಇರುತ್ತದೆ.  ಮಾರ್ಚ್ 21 ರಾತ್ರಿಯೇ ಬಸ್ ಗಳು ಡಿಪೋ ಸೇರಲಿವೆ. ಮಾರ್ಚ್ 22 ರ ರಾತ್ರಿ ಕೆಎಸ್ ಆರ್ ಟಿಸಿ ಬಸ್ ಗಳ ಸಂಚಾರ ಆರಂಭವಾಗಲಿದೆ. ಮುಂಗಡ ಟಿಕೆಟ್ ಕಾಯ್ದಿರಿಸಿದ್ದಲ್ಲಿ ಮಾತ್ರ ಬಸ್ ಸಂಚಾರವಿರುತ್ತದೆ ಎಂದು ಕೆಎಸ್ ಆರ್ ಟಿಸಿ ವ್ಯವಸ್ಥಾಪಕರು ತಿಳಿಸಿದ್ದಾರೆ.

Key words: Janatha curfew – KSRTC -bus -traffic – Sunday