ಮುಂದಿನ ಅಧಿವೇಶನದಲ್ಲಿ ಕಾಂಗ್ರೆಸ್ ಹಗರಣ ಬಯಲು ಮಾಡುತ್ತೇವೆ- ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ.

ರಾಯಚೂರು,ಅಕ್ಟೋಬರ್,11,2022(www.justkannada.in):  ಮುಂದಿನ ಅಧಿವೇಶನದಲ್ಲಿ ಕಾಂಗ್ರೆಸ್ ಹಗರಣಗಳನ್ನು ಬಯಲು ಮಾಡುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್​​ ಯಡಿಯೂರಪ್ಪ ಹೇಳಿದರು.

ರಾಯಚೂರು  ತಾಲೂಕಿನ ಗಿಲ್ಲೆಸುಗೂರಿನಲ್ಲಿ ನಡೆದೆ ಜನ ಸಂಕಲ್ಪಯಾತ್ರೆಯಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ, ರಾಬರ್ಟ್​ ವಾದ್ರಾ ಮಾಡಿದ್ದ ಹಗರಣಗಳ ಪಟ್ಟಿ ಇದೆ. ನ್ಯಾಷನಲ್​ ಹೆರಾಲ್ಡ್​​​ ಹಗರಣ ಗೊತ್ತಿಲ್ಲವೇ? ಹಗರಣವನ್ನೇ ಮಾಡದ ಪ್ರಧಾನಿ ಮೋದಿ ಬಗ್ಗೆ ಮಾತನಾಡ್ತೀರಾ? 25 ಲಕ್ಷ ಮೌಲ್ಯದ ಹ್ಯೂಬ್ಲೆಟ್​ ವಾಚ್​ ಕೊಟ್ಟಿದ್ಯಾರು ಗೊತ್ತಿಲ್ವಾ? ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.prime-minister-narendra-modi-cm-bs-yeddyurappa-praised-central-government

ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ. 2023ರ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನ ಗೆಲ್ಲುತ್ತೇವೆ. ಮತ್ತೆ ನಾವೇ ಅಧಿಕಾರದ  ಚುಕಾಣಿ ಹಿಡಿಯುತ್ತೇವೆ. ಸಿದ್ಧರಾಮಯ್ಯ ಸಿಎಂ ಕನಸು ಯಾವತ್ತೂ ನನಸಾಗಲ್ಲ. 8 ವರ್ಷ ಪ್ರಧಾನಿ ಮೋದಿ ಪಾರದರ್ಶಕ ಆಡಳಿತ ನೀಡಿದ್ದಾರೆ ಎಂದರು.

Key words: jana sankalpa yatra-raichur-Former CM-BS yeddyurappa