ಜಕ್ಕೂರು ವೈಮಾನಿಕ ತರಬೇತಿ ಶಾಲೆಗೆ ಮುಖ್ಯ ವಿಮಾನ ಬೋಧಕರಾಗಿ ಕ್ಯಾ. ಕಮಲ್ ಕಿಶೋರಿ ನೇಮಕ…

ಬೆಂಗಳೂರು ಮೇ,6,2021(www.justkananda.in): ಜಕ್ಕೂರು ವೈಮಾನಿಕ ತರಬೇತಿ ಶಾಲೆಗೆ ಮುಖ್ಯ ವಿಮಾನ ಬೋಧಕರಾಗಿ ಕ್ಯಾ. ಕಮಲ್ ಕಿಶೋರಿ ಅವರನ್ನು ನೇಮಕ ಮಾಡಲಾಗಿದೆ.jk

ಮೂರು ವರ್ಷಗಳಿಂದ ಜಕ್ಕೂರು ವೈಮಾನಿಕ ತರಬೇತಿ ಶಾಲೆ ಸ್ಥಗಿತವಾಗಿತ್ತು. ಮುಖ್ಯ ವೈಮಾನಿಕ ಬೋಧಕರಿಲ್ಲದೆ ವಿದ್ಯಾರ್ಥಿಗಳಿಗೆ ತರಬೇತಿ ಮರೀಚಿಕೆಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ಡಾ. ನಾರಾಯಣಗೌಡ, ತಕ್ಷಣವೆ ಬೋಧಕ ಸಿಬ್ಬಂದಿ ನೇಮಕಕ್ಕೆ ಸೂಚಿಸಿದ್ದರು. ಸಚಿವರ ಆಶಯದಂತೆ ಈಗ ಮುಖ್ಯ ವಿಮಾನ ಬೋಧಕ ಸಿಬ್ಬಂದಿ ನೇಮಕಮಾಡಲಾಗಿದೆ.

ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸ್ಯಾಂಖಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರು ಜಕ್ಕೂರು ವೈಮಾನಿಕ ತರಬೇತಿ ಶಾಲೆಗೆ ಎರಡು ತಿಂಗಳ ಹಿಂದೆ ಭೇಟಿ ನೀಡಿ ಪರಿಶೀಲಿಸಿದ್ದರು. ಈ ಸಂದರ್ಭದಲ್ಲಿ ಮುಖ್ಯ ವಿಮಾನ ಬೋಧಕ ಸಿಬ್ಬಂದಿ ಹುದ್ದೆ ಖಾಲಿ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಯುವ ಜನತೆಗೆ ಅತ್ಯುತ್ತಮ ಅವಕಾಶ ಇಲ್ಲಿ ಸಿಗುತ್ತಿತ್ತು. ಆದರೆ ಬೋಧಕ ಸಿಬ್ಬಂದಿ ಇಲ್ಲದ ಕಾರಣ ಯುವಜನತೆ ಅವಕಾಶ ವಂಚಿತವಾಗಿದೆ. ಶೀಘ್ರದಲ್ಲಿ ಸಿಬ್ಬಂದಿ ನೇಮಕ ಆಗಬೇಕು. ಅದಕ್ಕೆ ಬೇಕಾದ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಅದರ ಫಲವಾಗಿ ಇಂದು ಮುಖ್ಯ ವಿಮಾನ ಬೋಧಕ ಸಿಬ್ಬಂದಿ ನೇಮಕವಾಗಿದೆ. ಸಚಿವರ ಸೂಚನೆಯಂತೆ ನೇಮಕವಾದ ಸಮಿತಿ ಸಂದರ್ಶನ ನಡೆಸಿದೆ. ನಾಲ್ವರು ಸಂದರ್ಶನಕ್ಕೆ ಹಾಜರಾಗಿದ್ದು,  ಅವರಲ್ಲಿ ನವದೆಹಲಿ ಮೂಲದ ಅಭ್ಯರ್ಥಿಯನ್ನು ಸಮಿತಿ ಆಯ್ಕೆಮಾಡಿದೆ.

ಕ್ಯಾಪ್ಟನ್ ಕಮಲ್ ಕಿಶೋರಿ ನೇಮಕ

ನವದೆಹಲಿ ಮೂಲದ ಕ್ಯಾಪ್ಟನ್ ಕಮಲ್ ಕಿಶೋರಿ ಮುಖ್ಯ ವಿಮಾನ ಬೋಧಕ ಹುದ್ದೆಗೆ ನೇಮಕವಾಗಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಈ ಹುದ್ದೆಗೆ ಅವರನ್ನು ನೇಮಿಸಲಾಗಿದ್ದು, ಈ ತಿಂಗಳಾಂತ್ಯದಲ್ಲಿ ಜಕ್ಕೂರು ವೈಮಾನಿಕ ತರಬೇತಿ ಶಾಲೆಯಲ್ಲಿ ಕರ್ತವ್ಯ ಆರಂಭಿಸಲಿದ್ದಾರೆ. ವೈಮಾನಿಕ ತರಬೇತಿಯು 18 ತಿಂಗಳ ಕೋರ್ಸ್ ಆಗಿದೆ. ಪ್ರತಿ ಬ್ಯಾಚ್ ನಲ್ಲಿ  ಕನಿಷ್ಟ 50 ವಿದ್ಯಾರ್ಥಿಗಳು ತರಬೇತಿ ಪಡೆಯಲು ಅವಕಾಶವಿದೆ.jakkur-aerial-training-school-chief-flight-instructor-appointment-kamal-kishori

ಕೊರೊನಾ ನಿಯಂತ್ರಣಕ್ಕೆ ಬಂದರೆ ತಿಂಗಳಾಂತ್ಯದಲ್ಲೆ ತರಬೇತಿ ಆರಂಭ

ಪ್ರಸ್ತುತ ಕೊರೊನಾ ಎರಡನೇ ಅಲೆ ಅತಿಯಾಗಿದ್ದು, ಜನರು ಹೊರಗಡೆ ಓಡಾಡದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ವೈಮಾನಿಕ ತರಬೇತಿ ಆರಂಭಿಸುವುದಕ್ಕೆ ಅಡ್ಡಿಯಾಗಿದೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದೆ. ತಿಂಗಳಾಂತ್ಯದಲ್ಲಿ ಕೊವಿಡ್ -19 ಹತೋಟಿಗೆ ಬಂದಲ್ಲಿ, ವೈಮಾನಿಕ ತರಬೇತಿ ಆರಂಭಿಸುವ ಉದ್ದೇಶವಿದೆ.

 ಸಾಕಾರಗೊಂಡ ಸಚಿವರ ಆಶಯ

ಜಕ್ಕೂರಿನಲ್ಲಿ ವೈಮಾನಿಕ ತರಬೇತಿ ಶಾಲೆ ಆರಂಭವಾಗಬೇಕು. ಯುವಜನತೆಗೆ ಈ ಅವಕಾಶ ಲಭ್ಯವಾಗಬೇಕು. ಅದರಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಪ್ರತಿಭೆಗಳು ಈ ತರಬೇತಿಯನ್ನು ಪಡೆಯಬೇಕು ಎನ್ನುವುದು ಸಚಿವ ಡಾ. ನಾರಾಯಣಗೌಡ ಅವರ ಆಶಯ. ಅದೇ ಕಾರಣಕ್ಕಾಗಿ ಮೂರು ವರ್ಷಗಳಿಂದ ಖಾಲಿ ಇದ್ದ ಬೋದಕ ಸಿಬ್ಬಂದಿ ನೇಮಕಕ್ಕೆ ಮುತುವರ್ಜಿ ವಹಿಸಿ, ಯಶಸ್ವಿಯಾಗಿದ್ದಾರೆ. ಯುವ ಜನತೆ ಆಸಕ್ತಿಯಿಂದ ತರಬೇತಿ ಪಡೆದು ಉತ್ತಮ ಉದ್ಯೋಗ ಪಡೆಯುಂತಾಗಲಿ ಎಂದು ಸಚಿವ ನಾರಾಯಣಗೌಡ ಅಪೇಕ್ಷೆ ಪಟ್ಟಿದ್ದಾರೆ.

Key words: jakkur Aerial Training School-Chief Flight Instructor-Appointment – Kamal Kishori.