ಹಾಲಿವುಡ್‌ನ ದೊಡ್ಡ ಬಜೆಟ್‌ ಆಕ್ಷನ್ ಸಿನಿಮಾಗೆ ಜಾಕ್ವಲಿನ್ ಆಯ್ಕೆ

ಬೆಂಗಳೂರು, ಮಾರ್ಚ್ 30, 2021 (www.justkannada.in): ಪ್ರಿಯಾಂಕಾ, ದೀಪಿಕಾ ಬಳಿಕ ಜಾಕ್ವಲಿನ್ ಫರ್ನಾಂಡಿಸ್ ಹಾಲಿವುಡ್‌ಗೆ ಹಾರುತ್ತಿದ್ದಾರೆ!

ಹೌದು. ಹಾಲಿವುಡ್‌ನ ದೊಡ್ಡ ಬಜೆಟ್‌ನ ಆಕ್ಷನ್ ಸಿನಿಮಾಗೆ ಜಾಕ್ವಲಿನ್ ಆಯ್ಕೆ ಆಗಿದ್ದು. ಇದಕ್ಕಾಗಿ ತಯಾರಿ ಆರಂಭಿಸಿದ್ದಾರೆ.

ಜಾಕ್ವಿಲಿನ್ ನಟಿಸುತ್ತಿರುವ ಹಾಲಿವುಡ್‌ ಸಿನಿಮಾವು ‘ಮಹಿಳಾ ಪ್ರಧಾನ’ ಸಿನಿಮಾ ಆಗಿದೆ. ಆರು ಭಿನ್ನ ಕತೆಗಳುಳ್ಳ ‘ಅಂತಾಲಜಿ’ ಸಿನಿಮಾ ಇದಾಗಿರಲಿದ್ದು, ನಟಿಯರು ಭರ್ಜರಿ ಆಕ್ಷನ್ ಮೂಲಕ ರಂಜಿಸಲಿದ್ದಾರೆ.

ಆಕ್ಷನ್ ಸಿನಿಮಾಕ್ಕಾಗಿ ಈಗಾಗಲೇ ತಯಾರಿ ಆರಂಭಿಸಿದ್ದಾರೆ ಜಾಕ್ವಲಿನ್. ಮೊದಲೇ ಸಣ್ಣಗಿದ್ದ ಈ ನಟಿ ಇನ್ನಷ್ಟು ಸಣ್ಣಗಾಗಿದ್ದಾರೆ. ಜೊತೆಗೆ ಆಕ್ಷನ್‌ ದೃಶ್ಯಗಳಲ್ಲಿ ಪಾಲ್ಗೊಳ್ಳಲು ವಿಶೇಷ ತರಬೇತಿಯನ್ನು ಪಡೆಯುತ್ತಿದ್ದಾರೆ.