ಯುವಕರಿಂದ ಸಧೃಢ ರಾಷ್ಟ್ರ ನಿರ್ಮಾಣ ಸಾಧ್ಯ- ನ್ಯಾಯಾಧೀಶರಾದ ಸರಸ್ವತಿ ವಿಷ್ಣು ಕೊಸಂದರ್ ನುಡಿ.

ಮೈಸೂರು,ಅಕ್ಟೋಬರ್,26,2021(www.justkannada.in): ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮೈಸೂರು ಮತ್ತು ರಾಷ್ಟ್ರೀಯ ಸೇವಾ ಯೋಜನೆ, ಮೈಸೂರು ವಿಶ್ವವಿದ್ಯಾನಿಲಯ ಸಂಯುಕ್ತಾಶಯದಲ್ಲಿ  ರಾಷ್ಟ್ರ ನಿರ್ಮಾಣದಲ್ಲಿ ಯುವ ಜನತೆಯ ಜವಾಬ್ದಾರಿ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಆಚರಿಸಲಾಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ , ಸರಸ್ವತಿ ವಿಷ್ಣು ಕೂಸುಂದರ,  ಸದೃಢವಾದ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಅತಿಮುಖ್ಯವಾದುದು. ದೇಶದ ಎಲ್ಲಾ ಕ್ಷೇತ್ರಗಳಲ್ಲೂ ಯುವಕರು  ಪಾಲ್ಗೊಂಡು  ದೇಶದ ಸಮೃದ್ಧಿಯೆಡೆಗೆ ಕೊಂಡೊಯ್ಯಬೇಕು. ಜೊತೆಗೆ ಗ್ರಾಮೀಣ ಪ್ರದೇಶದ ಜನರಿಗೆ ಸಾಕ್ಷರತಾ ಕ್ಲಬ್ ಗಳ ಮೂಲಕ ಕಾನೂನು ನಿಯಮಗಳ ಅರಿವು ಮೂಡಿಸುವುದು ಯುವಕರಿಂದಲೇ ಆಗಬೇಕಿದೆ. ಆದ್ದರಿಂದ ಈ ರಾಷ್ಟ್ರನಿರ್ಮಾಣ ಯುವಾರಿಂದಲೇ ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ವಕೀಲರಾದ ಎಂ. ಎಸ್ ಸಾವಿತ್ರಿ ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಹೊರತೆಗೆದು ಅವರನ್ನು ನಿರ್ದಿಷ್ಟ ಮಾರ್ಗದಲ್ಲಿ ನಡೆಸಲು ಪೋಷಕರು ಮತ್ತು ಗುರು ಪಾತ್ರ ಪ್ರಮುಖವಾದುದು, ಸ್ವಾಮಿ ವಿವೇಕಾನಂದ ಗಾಂಧೀಜಿ. ಡಾಬಿ.ಆರ್ ಅಂಬೇಡ್ಕರ್, ಅಬ್ದುಲ್ ಕಲಾಂ ಮುಂತಾದ ಇಂತಹ ಮಹಾನ್  ವ್ಯಕ್ತಿಗಳ ತತ್ವಗಳನ್ನು ಚಿಂತನೆಗಳನ್ನು ಅಳವಡಿಸಿಕೊಂಡು ಪ್ರಸ್ತುತ ಸಮಾಜದಲ್ಲಿನ ಭ್ರಷ್ಟಾಚಾರ, ಲಂಚ ನಿರ್ಮೂಲನೆಯಲ್ಲಿ ಯುವಜನತೆಯು ಹೋರಾಟ ಮಾಡುವುದರ ಮೂಲಕ ಒಂದು ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಒಟ್ಟುಗೂಡಬೇಕೆಂದು ತಿಳಿಸಿದರು.

ಮುಖ್ಯ ಆತಿಥಿಗಳಾಗಿ ಆಗಮಿಸಿದ್ದ ದಿ ಇನ್ಸ್‌ಟಿಟ್ಯೂಟ್ ಆಫ್ ಎಜುಕೇಷನ್ ಟ್ರಸ್ಟ್ ನ ಕಾರ್ಯದರ್ಶಿ ಡಾ.ಎಂ.ಪುಟ್ಟಸ್ವಾಮಿ ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಪರಿಶ್ರಮದಿಂದ ಪರಿಶುದ್ಧವಾದ ಜೀವನವನ್ನು ನಿರ್ಮಿಸಿಕೊಂಡು ಭವ್ಯ ಭಾರತವನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಯೇಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.ಎಸ್.ರಾಜೇ ಅರಸ್ ಯುವಜನತೆ ಆದರ್ಶ ಪ್ರಜೆಗಳಾಗಿ ದೇಶದ ಉನ್ನತಿಗೆ ಶ್ರಮಿಸುವುದರೊಂದಿಗೆ ನವ ಭಾರತದ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ತಿಳಿಸಿಕೊಟ್ಟರು.

ಕಾರ್ಯಕ್ರಮವನ್ನು ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಎನ್.ಎಸ್.ಎಸ್ ಅಧಿಕಾರಿಗಳಾದ ಡಾ. ಟಿ. ರಮೇಶ್ ರವರು ಕಾರ್ಯಕ್ರಮವನ್ನು ಸಂಯೋಜಿಸಿ ಎಲ್ಲರನ್ನು ಸ್ವಾಗತಿಸಿದರು. ಶ್ರೀಮತಿ ತಮಶ್ರೀ ಎ. ಸಹಾಯಕ ಪ್ರಾಧ್ಯಾಪಕರು, ವಾಣಿಜ್ಯಶಾಸ್ತ್ರ ವಿಭಾಗ ಇವರು ವಂದಿಸಿದರು. ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ದರ್ಶಿನಿ ಜೆ ರವರು ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಎಲ್ಲಾ ಅಧ್ಯಾಪಕರು ಹಾಗೂ ಅಧ್ಯಾಪಕೇತರರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Key words: It is -possible – build – positive- nation – youth- Judge-Saraswati Vishnu Kosander.