ಲವ್ ಜಿಹಾದ್ ಕಾಯ್ದೆ ಜಾರಿ ವಿಚಾರ:  ಸರ್ಕಾರದ ವಿರುದ್ಧ ಶಾಸಕ ಯತೀಂದ್ರ ಸಿದ್ಧರಾಮಯ್ಯ ಕಿಡಿ…

kannada t-shirts

ಮೈಸೂರು.ಡಿಸೆಂಬರ್,3,2020(www.justkannada.in): ಬಹು ಸಂಖ್ಯಾತರನ್ನು ಓಲೈಸುವ ಸಲುವಾಗಿ ರಾಜ್ಯ ಬಿಜೆಪಿ ಸರ್ಕಾರ ಲವ್ ಜಿಹಾದ್ ಕಾನೂನನ್ನು ಜಾರಿಗೊಳಿಸಲು ಮುಂದಾಗಿದೆ ಎಂದು ವರುಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಯತೀಂದ್ರ ಸಿದ್ಧರಾಮಯ್ಯ, ಕೋಮು ಭಾವನೆಗಳನ್ನು ಕೆರಳಿಸಿ, ಬಹು ಸಂಖ್ಯಾತರನ್ನು ಓಲೈಸುವ ಸಲುವಾಗಿ ರಾಜ್ಯ ಸರ್ಕಾರ ಲವ್ ಜಿಹಾದ್ ಕಾನೂನನ್ನು ಜಾರಿಗೊಳಿಸಲು ಮುಂದಾಗಿದೆ. ಆದರೆ ಕಾನೂನು ಪ್ರಕಾರ 18 ವರ್ಷ ಮೇಲ್ಪಟ್ಟವರು ತಮಗಿಷ್ಟ ಬಂದವರನ್ನು ಮದುವೆಯಾಗಲು ಅವಕಾಶ ಇದೆ‌. ಆದರೆ ಲವ್ ಜಿಹಾದ್ ಕಾನೂನು ಜಾರಿಗೊಳಿಸಲು ಮುಂದಾಗುವ ಮೂಲಕ ವೈಯಕ್ತಿಕ ಸ್ವಾತಂತ್ರ್ಯವನ್ನು ಹರಣ ಮಾಡಲು ರಾಜ್ಯ ಸರ್ಕಾರ ಹೊರಟಿದೆ ಎಂದು ಟೀಕಿಸಿದರು.logo-justkannada-mysore

ಗ್ರಾಮ ಪಂಚಾಯತಿ ಚುನಾವಣೆಗೆ ಕಾಂಗ್ರೆಸ್ ಸಿದ್ದತೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಯತೀಂದ್ರ ಸಿದ್ಧರಾಮಯ್ಯ, ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸ್ಟ್ರಾಂಗ್ ಮಾಡಲಾಗುತ್ತಿದೆ. ಪ್ರತಿ ಗ್ರಾಮಗಳಲ್ಲೂ ಕಾಂಗ್ರೆಸ್ ನ ಅಭಿವೃದ್ಧಿ ಕೆಲಸಗಳ ಬಗ್ಗೆ ತಿಳಿಸಲಾಗುತ್ತಿದೆ. 18ವರ್ಷ ಮೇಲ್ಪಟ್ಟವರನ್ನು ಮತದಾರ ಪಟ್ಟಿಗೆ ಸೇರಿಸುವ ಕೆಲಸ ಸಹ ಆಗುತ್ತಿದೆ. ಈಗಾಗಲೇ ಕೆಪಿಸಿಸಿ ಸಹ ಎಲ್ಲಾ ನಾಯಕರಿಗೆ ಚುನಾವಣೆ ವಿಚಾರವಾಗಿ ನಿರ್ದೇಶನ ನೀಡಿದೆ. ಕಾರ್ಯಕರ್ತರು ಎಫೆಕ್ಟಿವ್ ಆಗಿ ಕಾರ್ಯನಿರ್ವಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

ಹೆಚ್. ವಿಶ್ವನಾಥ್ ಆರೋಪಕ್ಕೆ ಯತೀಂದ್ರ ಸಿದ್ಧರಾಮಯ್ಯ ತಿರುಗೇಟು.

ಕುರುಬ ಸಮುದಾಯಕ್ಕೆ ಎಸ್ ಟಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ. ಹೆಚ್, ವಿಶ್ವನಾಥ್ ಆರೋಪಕ್ಕೆ ತಿರುಗೇಟು ನೀಡಿರುವ ಯತೀಂದ್ರ ಸಿದ್ಧರಾಮಯ್ಯ, ನಮ್ಮ ತಂದೆ ಹಿಂದಿನಿಂದಲು ಕುರುಬರಿಗೆ ಎಸ್‌ಟಿ‌ ಮೀಸಲಾತಿ ಪರವಾಗಿಯೇ ಇದ್ದಾರೆ. ಈಗ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಅವರದೇ ಸರ್ಕಾರವಿದೆ. ಹೀಗಾಗಿ ಹೋರಾಟ ಮಾಡುವ ಅಗತ್ಯವೇ ಇಲ್ಲ.

ನೇರವಾಗಿ ಅದನ್ನ ಅನುಷ್ಟಾನಕ್ಕೆ ತರಬಹುದು. ಇದನ್ನ ಮಾಡೋದು ಬಿಟ್ಟು ಹೋರಾಟದ ಪ್ರಸ್ತಾಪ‌ ಮಾಡ್ತಿರೋದು ಯಾಕೆ.? ಇದನ್ನ ಇಟ್ಟುಕೊಂಡು ರಾಜಕೀಯ ಮಾಡಬೇಡಿ ಎಂದು ಕುಟುಕಿದರು.issue-love-jihad-act-mla-yatindra-siddaramaiah-against-government

ಸಿದ್ದರಾಮಯ್ಯ ಚುನಾವಣೆಯಲ್ಲಿ ಹಣ ಹಂಚಿದ್ದಾರೆಂಬ ಬಿಜೆಪಿ ಆರೋಪ ವಿಚಾರಕ್ಕೆ ಟಾಂಗ್ ನೀಡಿದ ಯತೀಂದ್ರ ಸಿದ್ಧರಾಮಯ್ಯ, ಬಿಜೆಪಿಗೆ ಹಣದಲ್ಲಿ ಚುನಾವಣೆ ಮಾಡಿ ಅಭ್ಯಾಸ. ಅದನ್ನ ನಮ್ಮ ಮೇಲೆ‌ ಆರೋಪ ಮಾಡಿ ಗೂಬೆ ಕೂರಿಸ್ತಿದ್ದಾರೆ. ಉಪ ಚುನಾವಣೆಯಲ್ಲಿ ಏನಾಗಿದೆ ಎಂಬುದನ್ನ ನಾವು ಹಾಗೂ ಜನರು ನೋಡಿದ್ದೇವೆ ಎಂದು ತಿರುಗೇಟು ನೀಡಿದರು.

english summary…

Yateendra Siddaramaiah angry over the decision of State Govt. to introduce law against love jihad
Mysuru, Dec. 3, 2020 (www.justkannada.in): Congress MLA Dr. Yateendra Siddaramaiah today criticized the State Government by saying that it is introducing the law against love jihad to please the majority communities and people belonging to the creamy layer of the society.issue-love-jihad-act-mla-yatindra-siddaramaiah-against-government
Speaking to the presspersons in Mysuru today, he said that the State Govt. is playing with the communal emotions of the people by this move. According to law, anyone above 18 years of age can marry any person of their choice. But, by doing this, the State Govt. is trying to snatch away the people’s freedom.
keywords: Yateendra Siddaramaiah/ law against love jihad

Key words: Issue -Love Jihad Act- MLA-Yatindra Siddaramaiah – against – government.

 

website developers in mysore