ಸಿಡಿ ಪ್ರಕರಣದಲ್ಲಿ ಮಹಾ ನಾಯಕನ  ವಿಚಾರ:  ಡಿಕೆ ಶಿವಕುಮಾರ್ ಗೆ ಸಚಿವ ಎಸ್.ಟಿ ಸೋಮಶೇಖರ್ ಟಾಂಗ್..

ಮೈಸೂರು,ಮಾರ್ಚ್,19,2021(www.justkannada.in): ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಹಾಳು ಮಾಡಿದ ಮಹಾನ್ ನಾಯಕ‌ ಯಾರು ಅಂತಾ ತಿಳಿದುಕೊಳ್ಳುವ ಕುತೂಹಲ ರಾಜ್ಯಕ್ಕೆ ಇದೆ. ಆದರೆ ಡಿ.ಕೆ ಶಿವಕುಮಾರ್ ತಮ್ಮನ್ನೇ ಏಕೆ ಮುಟ್ಟಿಕೊಳ್ಳುತ್ತಿದ್ದಾರೆ. ಎಲ್ಲಾ ಪಕ್ಷದಲ್ಲೂ ಮಹಾನ್ ನಾಯಕರಿದ್ದಾರೆ. 10 ಮತ ಹಾಕಿಸುವವನೇ ಈಗ ಮಹಾನ್ ನಾಯಕನೇ. ಅದರಲ್ಲಿ ಇವರು ನಾವು ಅಂತಾ ಏಕೆ ಅಂದುಕೊಳ್ಳಬೇಕು ಎಂದು ಸಚಿವ ಎಸ್.ಟಿ ಸೋಮಶೇಖರ್ ಟಾಂಗ್ ನೀಡಿದ್ದಾರೆ.jk

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಶೀಘ್ರದಲ್ಲಿ ಆ ಮಹಾನ್ ನಾಯಕ ಯಾರು ಅನ್ನೋದು ಗೊತ್ತಾಗಲಿದೆ. ಮನೆ ಹಾಳು ಮಾಡಿದ ಮಹಾನ್ ನಾಯಕ‌ ಯಾರು ಅಂತಾ ತಿಳಿದುಕೊಳ್ಳುವ ಕುತೂಹಲ ರಾಜ್ಯಕ್ಕೆ ಇದೆ. ಅದರಲ್ಲಿ ನಾನು ಸಹ ಒಬ್ಬ. ಶೀಘ್ರದಲ್ಲಿ ಆ ಮಹಾನ್ ನಾಯಕ ಯಾರು ಅನ್ನೋದು ಗೊತ್ತಾಗಲಿದೆ. ಎಸ್ ಐ ಟಿ ಈ ಬಗ್ಗೆ ತನಿಖೆ ನಡೆಸುತ್ತಿದೆ. ಡಿಕೆ ಶಿವಕುಮಾರ್ ತಮ್ಮನ್ನೇ ಏಕೆ ಮುಟ್ಟಿಕೊಳ್ಳುತ್ತಿದ್ದಾರೆ. ಎಲ್ಲಾ ಪಕ್ಷದಲ್ಲೂ ಮಹಾನ್ ನಾಯಕರಿದ್ದಾರೆ. 10 ಮತ ಹಾಕಿಸುವವನೇ ಈಗ ಮಹಾನ್ ನಾಯಕನೇ. ಅದರಲ್ಲಿ ಇವರು ನಾವು ಅಂತಾ ಏಕೆ ಅಂದುಕೊಳ್ಳಬೇಕು. ಇಂತಹ ಸಿಡಿ‌ ಮಾಡಿ ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯಕ್ಕೆ ಹಂಚಿದ್ದಾರೆ. ಮನೆ ಮನಗಳನ್ನು ಮುರಿದಿದ್ದಾರೆ. ಇಂತಹ ಮನೆ ಮುರುಕ ಪುಣ್ಯಾತ್ಮ ಯಾರು ಅನ್ನೋದು ಗೊತ್ತಾಗಬೇಕಿದೆ ಎಂದರು.

ಕೈ ನಾಯಕರ ತೀರ್ಮಾನಕ್ಕೆ ಸಚಿವ ಎಸ್.ಟಿ ಸೋಮಶೇಖರ್ ಅಸಮಾಧಾನ…

ಸದನದಲ್ಲಿ ನ್ಯಾಯಾಲಯಕ್ಕೆ ಹೋದ ಸಚಿವರಿಂದ ಉತ್ತರ ಪಡೆಯುವುದಿಲ್ಲ ಎಂಬ ಕಾಂಗ್ರೆಸ್ ಪಕ್ಷದ ನಾಯಕರ ತೀರ್ಮಾನ ಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ  ಸಚಿವ ಎಸ್ ಟಿ ಸೋಮಶೇಖರ್ , ನಮ್ಮ ವೈಯಕ್ತಿಕ ತೇಜೋವಧೆ ತಪ್ಪಿಸಿಕೊಳ್ಳಲು ನ್ಯಾಯಾಲಯದ ಮೊರೆ  ಹೋಗಿದ್ದವು ಎಂದರು. ಇದೇ ವೇಳೆ ಮೇಟಿ ಪ್ರಕರಣದ ಉದಾಹರಣೆ ನೀಡಿದ ಸಚಿವ ಎಸ್ ಟಿ ಸೋಮಶೇಖರ್., ಮೇಟಿ ಪ್ರಕರಣದಲ್ಲಿ ಅವರ ಮಾನ ಹರಾಜಾಯ್ತು. ಮನೆ ಮನಗಳು ಮುರಿದು ಹೋದವು. ಮಾನ ಮರ್ಯಾದೆ ಎಲ್ಲವೂ ಹೋಯಿತು. ಮೂರು ತಿಂಗಳ ನಂತರ ಅದು ನಕಲಿ ಸಿಡಿ ಎಂದು ಸಾಬೀತಾಯ್ತು. ಆದರೆ ಹೋದ ಮಾನ ವಾಪಸ್ಸು ಬಂತಾ ? ಇದೇ ಕಾರಣಕ್ಕೆ ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದು ತಿಳಿಸಿದರು.

ಸದನಕ್ಕೆ ಹೋಗಲು ನನಗೆ ಬೇಜಾರಾಗುತ್ತಿದೆ…

ಸದನದಲ್ಲಿ ಸಿಡಿ ಗದ್ದಲ ವಿಚಾರ ಕುರಿತು ಬೇಸರ ವ್ಯಕ್ತಪಡಿಸಿದ ಸಚಿವ ಎಸ್.ಟಿ ಸೋಮಶೇಖರ್, ಸದನಕ್ಕೆ ಹೋಗಲು ನನಗೆ ಬೇಜಾರಾಗುತ್ತಿದೆ. ನನಗೆ ಸದನಕ್ಕೆ ಹೋಗಲು ನೋವಾಗುತ್ತಿದೆ. ರಾಜ್ಯದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕು. ಆದರೆ ಬೇಡದ ವಿಚಾರಗಳಿಗೆ ಸಮಯ ಮೀಸಲುಗುತ್ತಿದೆ. ಆದರೆ ಪ್ರಜಾಪ್ರಭುತ್ವ ಇಷ್ಟೇ ಅನ್ನುವಂತಾಗಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್‌ ನವರು ನೈತಿಕತೆ ಅನೈತಿಕತೆ ಪಾಠ ಹೇಳಬೇಡಿ. ನಿಮ್ಮ ಅನೈತಿಕತೆಯಿಂದಲೇ ಸಮ್ಮಿಶ್ರ ಸರ್ಕಾರ ಬಿದ್ದಿದ್ದು. ಮುಂಚೆಯಿಂದಲೂ ನಿಮಗೆ ನೈತಿಕತೆ ಇಲ್ಲ. ನೈತಿಕತೆ ಇಲ್ಲದ ನೀವು ನನ್ನನ್ನು ಏಕೆ ಕೇಳುತ್ತೀರಿ ? ಎಂದು ಎಸ್.ಟಿ ಸೋಮಶೇಖರ್ ಹರಿಹಾಯ್ದರು.

ಕೋರ್ಟ್ ನಲ್ಲಿ ತಡೆಯಾಜ್ಞೆ ಸಿಕ್ಕಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಸ್.ಟಿ ಸೋಮಶೇಖರ್, ಕೇವಲ ಸಿಡಿಗಾಗಿ ತಡೆ ಕೋರಿರಲಿಲ್ಲ. ನಾವು ಸರ್ಕಾರ ಬೀಳಿಸಿ ಸರ್ಕಾರ ತಂದ ಕಾರಣ ನಮ್ಮನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಖಚಿತ ಮಾಹಿತಿ ಇತ್ತು. ಯಾವುದಾದರೂ ವಿಚಾರದಲ್ಲಿ ನಮ್ಮನ್ನು ತೇಜೋವಧೆ ಮಾಡಬಹುದು ಅನ್ನೋ ಕಾರಣಕ್ಕೆ ನ್ಯಾಯಾಲಯದ ಮೊರೆ ಹೋಗಿದ್ವಿ. ನ್ಯಾಯಾಲಯ 31 ರವರೆಗೂ ತಡೆಯಾಜ್ಞೆ ನೀಡಿದೆ ಎಂದರು. issue - CD case-maha nayaka-minister- ST Somashekhar –Tong- DK Sivakumar.

ನಂಜನಗೂಡು ಪಂಚ ಮಹಾರಥೋತ್ಸವಕ್ಕೆ ಬ್ರೇಕ್ ಹಾಕಿರುವ ವಿಚಾರ ಕುರಿತು ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್,  ಈ‌ ಬಗ್ಗೆ ಆರೋಗ್ಯ ಸಚಿವ ಡಾ ಕೆ ಸುಧಾಕರ್‌ಗೆ ಮಾಹಿತಿ ನೀಡಿ ಅವರ ಜೊತೆ ಮಾತನಾಡಿ ಅಂತಿಮ ನಿರ್ಧಾರ ಮಾಡಲಾಗುತ್ತೆ ಎಂದರು.

Key words: issue – CD case-maha nayaka-minister- ST Somashekhar –Tong- DK Sivakumar.