ಪ್ರಭಾವಿಗಳ ಬಗ್ಗೆ ತನಿಖೆ ಮಾಡಿದ್ದಕ್ಕೆ ರವೀಂದ್ರನಾಥ್ ಅವರನ್ನ ವರ್ಗಾವಣೆ ಮಾಡಿದ್ದರೇ ಅದು ದೊಡ್ಡ ಅಪರಾಧ-ಮಾಜಿ ಸಿಎಂ ಸಿದ್ಧರಾಮಯ್ಯ.

kannada t-shirts

ಮೈಸೂರು,ಮೇ,11.2022(www.justkannada.in):  ಐಪಿಎಸ್ ಹುದ್ಧೆಗೆ ರವೀಂದ್ರನಾಥ್ ರಾಜೀನಾಮೆ ವಿಚಾರ ಸಂಬಂಧ ಪ್ರಭಾವಿಗಳ ಬಗ್ಗೆ ತನಿಖೆ ಮಾಡಿದ್ದಕ್ಕೆ ರವೀಂದ್ರನಾಥ್ ಅವರನ್ನ ವರ್ಗಾವಣೆ ಮಾಡಿದ್ದರೇ ಅದು ದೊಡ್ಡ ಅಪರಾಧ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದರು.

ಮೈಸೂರಿನಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರವೀಂದ್ರನಾಥ್ ಎಂಬ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ನಿನ್ನೆ ರಾಜೀನಾಮೆ ನೀಡಿದ್ದಾರೆ. ಅವರು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿದ್ದರು. ನಕಲಿ ಜಾತಿ ಪ್ರಮಾಣಪತ್ರ ಪಡೆದವರ ಮೇಲೆ ತನಿಖೆ ಮಾಡಿ, ಕ್ರಮ ಕೈಗೊಳ್ಳುವುದು ಅವರ ಕರ್ತವ್ಯವಾಗಿತ್ತು. ರವೀಂದ್ರನಾಥ್ ಅವರು ಪ್ರಭಾವಿ ವ್ಯಕ್ತಿಗಳ ಬಗ್ಗೆ ತನಿಖೆ ಮಾಡಿದ್ದು, ಹಾಗಾಗಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ ಎಂದು ವರದಿಯಾಗಿದೆ ಹಾಗೂ ಸ್ವತಃ ರವೀಂದ್ರನಾಥ್ ಅವರೇ ಈ ಮಾತು ಹೇಳಿದ್ದಾರೆ. ಸರ್ಕಾರ ಈ ರೀತಿ ಮಾಡಿದ್ದರೆ ಅದು ದೊಡ್ಡ ಅಪರಾಧ ಎಂದರು.

ರೇಣುಕಾಚಾರ್ಯ ತಮ್ಮ ಪುತ್ರಿಗಾಗಿ ಬೇಡ ಜಂಗಮ ಜಾತಿಯ ನಕಲಿ ಜಾತಿ ಪ್ರಮಾಣಪತ್ರ ತೆಗೆದುಕೊಂಡಿದ್ದಾರೆ. ಈ ವಿಚಾರ ಸದನದಲ್ಲೂ ಚರ್ಚೆಯಾಗಿದೆ. ರೇಣುಕಾಚಾರ್ಯ ಬೇಡ ಜಂಗಮ ಜಾತಿ ಪ್ರಮಾಣಪತ್ರಕ್ಕೆ ಅರ್ಹರಲ್ಲ, ಈ ರೀತಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕಲ್ವ? ಎಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿರುತ್ತದೆ ಅಲ್ಲಿ ಸುಭದ್ರ ಸರ್ಕಾರ, ಜನಪರ ಆಡಳಿತ ಇರಲು ಸಾಧ್ಯವಿಲ್ಲ. ರಾಜ್ಯದಲ್ಲಿ ದುರ್ಬಲವಾದ ಭ್ರಷ್ಟ ಸರ್ಕಾರವಿದೆ, ಇಂತಹ ಸರ್ಕಾರದಲ್ಲಿ ನ್ಯಾಯ ಎಲ್ಲಿ ಸಿಗುತ್ತೆ? ಎಂದು ಸಿದ್ಧರಾಮಯ್ಯ ಕಿಡಿಕಾರಿದರು.

Key words: IPS-Officer- Ravindranath-transfer – former CM -Siddaramaiah.

website developers in mysore