ಇಂದಿನಿಂದ ದುಬೈನಲ್ಲಿ ಐಪಿಎಲ್ ಪುನಾರಂಭ: ಕ್ರಿಕೆಟ್ ಅಭಿಮಾನಿಗಳ ಸಂಭ್ರಮ

Promotion

ಬೆಂಗಳೂರು, ಸೆಪ್ಟೆಂಬರ್ 18, 2021 (www.justkannada.in): ಇಂದಿನಿಂದ ದುಬೈನಲ್ಲಿ
ಐಪಿಎಲ್ ಗೆ ಮರು ಚಾಲನೆ ಸಿಗಲಿದೆ.

ಕೋವಿಡ್ ಕಾರಣದಿಂದ ಭಾರತದಲ್ಲಿ ಅರ್ಧಕ್ಕೆ ನಿಂತಿದ್ದ 2021ರ ಐಪಿಎಲ್ಗೆ ಬರೋಬ್ಬರಿ ನಾಲ್ಕೂವರೆ ತಿಂಗಳ ಬಳಿಕ ಪುನಾರಂಭವಾಗಲಿದೆ. ದುಬೈ, ಶಾರ್ಜಾ, ಅಬುಧಾಬಿಯಲ್ಲಿ ಉಳಿದ 31 ಪಂದ್ಯಗಳು ನಡೆಯಲಿವೆ.

ಮೇ 2ರಂದು ಅಹ್ಮದಾಬಾದ್ನಲ್ಲಿ ಪಂಜಾಬ್-ಡೆಲ್ಲಿ ನಡುವಿನ ಮುಖಾಮುಖೀ ಬಳಿಕ ಜೈವಿಕ ಸುರಕ್ಷಾ
ವಲಯದಲ್ಲೂ ಕೊರೊನಾ ಕೇಸ್ ಕಂಡುಬಂದುದರಿಂದ ಪಂದ್ಯಾವಳಿಯನ್ನು ನಿಲ್ಲಿಸಲಾಗಿತ್ತು.

ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಪ್ರಸಕ್ತ ಋತುವಿನಲ್ಲಿ
ಗಮನಾರ್ಹ ಸಾಧನೆಗೈದಿರುವ ಚೆನ್ನೈ ಸೂಪರ್ ಕಿಂಗ್ಸ್ ಎದುರಾಗಲಿವೆ.